ಕರಾವಳಿ

ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯಯುಕ್ತ ತರಬೇತಿ : ಅರ್ಜಿ ಅಹ್ವಾನ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಮೇ 30 : ದೇಶದಲ್ಲಿ ಕೋವಿಡ್-19 ಸೋಂಕಿನ ನಿಯಂತ್ರಣಕ್ಕಾಗಿ ಆರೋಗ್ಯ ವಲಯದಲ್ಲಿ ಕೌಶಲ್ಯಯುಕ್ತ ಸಹಾಯಕ ನುರಿತ ಸಿಬ್ಬಂದಿಗಳ ಅವಶ್ಯಕತೆಯನ್ನು ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಮನಗಂಡು ಕೊರತೆಯಿರುವ ಮಾನವ ಸಂಪನ್ಮೂಲವನ್ನು ಪೂರೈಸಲು ಪರಿಣಿತ ಸಿಬ್ಬಂದಿಗಳ ಕಾರ್ಯಪಡೆಯನ್ನು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ 3.0 ಅಡಿಯಲ್ಲಿ ನಿರ್ದಿಷ್ಟ ಜಾಬ್‍ರೋಲ್‍ಗಳಲ್ಲಿ ಅಲ್ಪಾವಧಿ ತರಬೇತಿಯನ್ನು ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮುಖಾಂತರ ಜಿಲ್ಲಾ ಕೌಶಲ್ಯ ಮಿಷನ್ ಅಡಿಯಲ್ಲಿ ಪಿ.ಹೆಚ್.ಸಿ/ಸಿ.ಹೆಚ್.ಸಿ/ಸಾರ್ವಜನಿಕ ಆಸ್ಪತ್ರೆ/ಜಿಲ್ಲಾ ಆಸ್ಪತ್ರೆಗಳಲ್ಲಿ ಆನ್‍ಲೈನ್ ತರಬೇತಿ ನಡೆಸಿ, ಕೌಶಲ್ಯ ಮೌಲ್ಯಮಾಪನಗೊಳಿಸಿ ನಂತರ ಸ್ಥಳೀಯ ಆರೋಗ್ಯ ಕೇಂದ್ರ/ ಆಸ್ಪತ್ರೆಗಳಲ್ಲಿ ಅವಶ್ಯವಿರುವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಗಿದೆ.

ತರಬೇತಿಗೆ 18 ರಿಂದ 45 ವರ್ಗಗಳ ವಯೋಮಿತಿಯ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ದಿನಾಂಕ 03-06-2021 ರೊಳಗಾಗಿ ಗೂಗಲ್ ಲಿಂಕ್ https://forms.gle/L5mxLY637EEQ5Jf18 ನಲ್ಲಿ ದಾಖಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.

10ನೇ ತರಗತಿ ಪಾಸಾದವರಿಗಾಗಿ ಜನರಲ್ ಡ್ಯೂಟಿ ಅಸಿಸ್ಟೆಂಟ್, ಹೋಂ ಹೆಲ್ತ್ ಏಡ್, ಜನರಲ್ ಡ್ಯೂಟಿ ಅಸಿಸ್ಟೆಂಟ್ ಅಡ್ವಾನಸ್ಡ್ (ಕ್ರಿಟಿಕಲ್ ಕೇರ್); 12ನೇ ತರಗತಿಯ ವಿಜ್ಞಾನ ವಿಷಯದಲ್ಲಿ ಪಾಸಾದವರಿಗಾಗಿ ಫ್ಲೆಬೋಟೊಮಿಸ್ಟ್, ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಷಿಯನ್-ಬೇಸಿಕ್ ಹಾಗೂ 3 ರಿಂದ 5 ವಷಗಳ ಅನುಭವವುಳ್ಳ ITI ಪಾಸಾದ ಅಭ್ಯರ್ಥಿಗಳಿಗೆ ಅಥವಾ ಇಲೆಕ್ಟ್ರಾನಿಕ್/ಇಲೆಕ್ಟ್ರಿಕಲ್/ಕಂಪ್ಯೂಟರ್/ ತತ್ಸಮ ವಿಷಯದಲ್ಲಿ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿಗೆ ಮೆಡಿಕಲ್ ಎಕ್ವಿಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ಜಾಬ್‍ರೋಲ್‍ಗಳಲ್ಲಿ ತರಬೇತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9480324002 / 8050125951 / 7259350952 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments are closed.