ಆರೋಗ್ಯ

ಕೊರೋನಾ ಭೀತಿ: ಆಲೂರು, ವಂಡ್ಸೆ ಸಹಿತ ಸ್ವಯಂ ಲಾಕ್ ಆಗುತ್ತಿದೆ ಕುಂದಾಪುರ, ಬೈಂದೂರು ತಾಲೂಕಿನ ಕೆಲವು ಹಳ್ಳಿಗಳು..!

Pinterest LinkedIn Tumblr

ಕುಂದಾಪುರ: ದಿನದಿಂದ ದಿನಕ್ಕೆ ಕರೋನಾ ಹಬ್ಬುವಿಕೆ ಹೆಚ್ಚಿ ಆತಂಕ ಒಳಗಾದ ಗ್ರಾಮ ಪಂಚಾಯಿತಿಗಳು ಸ್ವಯಂ ಪ್ರೇರಿತ ಲಾಕ್ ಒಳಗೆ ಸೇರಿಕೊಳ್ಳುತ್ತಿವೆ. ಕೆಲವು ಗ್ರಾಮಗಳು ಈಗಾಗಲೇ ಲಾಕ್‌ಡೌನ್ ಘೊಷಿಸಿಕೊಂಡು ಲಾಕ್ ಆಗಿದ್ದು, ಮತ್ತಷ್ಟು ಗ್ರಾಮಗಳು ಲಾಕ್ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿವೆ. ಕೊರೋನಾ ಸೋಂಕು‌ ಹರಡುವುದನ್ನು ತಡೆಯಲು ಆಯಾಯ ಗ್ರಾ.ಪಂ ವ್ಯಾಪ್ತಿಯಲ್ಲಿ ಈ ಮುಂಜಾಗೃತಾ ಕ್ರಮ ವಹಿಸಲಾಗಿದೆ.ಕೊರೋನಾ ಸೋಂಕು‌ ಹರಡುವುದನ್ನು ತಡೆಯಲು ಆಯಾಯ ಗ್ರಾ.ಪಂ ವ್ಯಾಪ್ತಿಯಲ್ಲಿ ಈ ಮುಂಜಾಗೃತಾ ಕ್ರಮ ವಹಿಸಲಾಗಿದೆ.

ಕುಂದಾಪುರ ಬೈಂದೂರು ತಾಲೂಕಿನಲ್ಲಿ ಒಟ್ಟು 65 ಗ್ರಾಮಗಳಿದ್ದು, ಸಿದ್ದಾಪುರ, ವಂಡ್ಸೆ, ಇಡೂರು ಕುಂಜ್ಞಾಡಿ, ಆಲೂರು, ಜಡ್ಕಲ್ ಗ್ರಾಮಗಳು ಲಾಕ್‌ಡೌನ್ ಆಗಿವೆ. ದಿನೇ ದಿನೇ ಹೆಚ್ಚುತ್ತಿರುವ ಕರೋನಾ ಪ್ರಕರಣ ಹಾಗೂ ಸಾವಿನ ಸಂಖ್ಯೆ ಪರಿಗಣನೆಗೆ ತೆಗೆದುಕೊಂಡು ಗ್ರಾಪಂ ಕೋವಿಡ್ ನಿರ್ಮೂಲನಾ ಕಾರ್‍ಯಪಡೆ ಲಾಕ್‌ಡೌನ್ ನಿರ್ಧಾರಕ್ಕೆ ಬಂದಿದೆ. ತಲ್ಲೂರಿನಲ್ಲೂ ಶನಿವಾರ ಲಾಕ್ ಇತ್ತು. ಚಿತ್ತೂರು ಗ್ರಾ.ಪಂ ವ್ಯಾಪ್ತಿಯಲ್ಲೂ ಎರಡು ದಿನ ಲಾಕ್ಡೌನ್ ಮಾಡಲಾಗಿದೆ.

ಲಾಕ್‌ಡೌನ್ ಸಮಯದಲ್ಲಿ ಹಳ್ಳಿಗರಿಗೆ ಸಮಸ್ಯೆ ಆಗದಂತೆ ಲಾಕ್‌ಡೌನ್ ಮುನ್ನಾ ದ್ವನಿವರ್ಧಕ ಮೂಲಕ ಪ್ರಚಾರ ಮಾಡಿ, ಒಂದು ದಿನ ಅಗತ್ಯ ವಸ್ತುಗಳ ಕೊಳ್ಳಲು ಅವಕಾಶ ಮಾಡಿಕೊಟ್ಟು, ನಂತರ ಇಡೀ ಗ್ರಾಮವನ್ನೇ ಲಾಕ್ ಮಾಡಿದ್ದು, ಹೊರಗಿಂದ ಯಾರೂ ಬಾರದಂತೆ, ಒಳಗಿಂದ ಹೊರಗೆ ಹೋಗದಂತೆ ಗ್ರಾಪಂ ಸದಸ್ಯರು, ಟಾಸ್ಕ್‌ಪೋರ್ಸ್ ಸದಸ್ಯರು, ಗ್ರಾಮಸ್ತರು ರಸ್ತೆಯಲ್ಲಿ ಕಾವಲು ಕೂರುವ ಮೂಲಕ ಲಾಕ್‌ಡೌನ್ ಯಶಸ್ಸಿಗೆ ಪ್ರಯತ್ನಿಸುತ್ತಿದ್ದಾರೆ. ತುರ್ತು ವಿಷಯ ಬಿಟ್ಟರೆ ಮತ್ತಾವುದಕ್ಕೂ ಆವಕಾಶವೇ ಇಲ್ಲ. ಒಟ್ಟಾರೆ ಹಳ್ಳಿಗರು ತಮ್ಮ ಊರು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಗ್ರಾಪಂ ಇಟ್ಟ ಹೆಜ್ಜೆ :
*ಅಂಗಡಿ ಮಾಲೀಕರಿಗೆ ಗ್ರಾಪಂ ವಿಧಿಸಿದ ನಿಯಮ ಪಾಲಿಸಲು ಸೂಚನೆ, ಹೊರ ಜಿಲ್ಲೆಯಿಂದ ಬಂದವರ ಕರೋನಾ ಟೆಸ್ಟ್, ವ್ಯಾಕ್ಸಿನ್ ಸಂಖ್ಯೆ ಹೆಚ್ಚಳ, ಮನೆಗೆ ತೆರಳಿ ಪರೀಕ್ಷೆ, ಪಂಚಾಯಿತಿ ವ್ಯಾಪ್ತಿ ಪ್ರತಿಯೊಬ್ಬರ ಪರೀಕ್ಷೆ.
*ಹೋಮ್ ಐಸೋಲೇಶನ್ ಮನೆಗೆ ಪ್ರತಿನಿತ್ಯ ಆಶಾ ಕಾರ್ಯಕರ್ತೆ, ಗ್ರಾಪಂ ಸಿಬ್ಬಂದಿ ಭೇಟಿ, ನಿಯಮಿತ ವೈದ್ಯಾಧಿಕಾರಿ, ಆರೋಗ್ಯ ಸಹಾಯಕರು ಭೇಟಿ. ಪಾಸಿಟಿವ್ ಮನೆ ಸೀಲ್‌ಡೌನ್ . ಪ್ರತಿ ವಾರ್ಡ್ ಇಬ್ಬರು ಸ್ವಯಂಸೇವಕರ ನೇಮಕ. ಪ್ರತಿ ಮನೆಗೆ ಅವರಿಂದ ಅಗತ್ಯ ವಸ್ತುಗಳ ತಲುಪಿಸುವುದು. ಇದಕ್ಕೆ ಬೇಕಾದ ವಾಹನ ವ್ಯವಸ್ಥೆ ಪಂಚಾಯಿತಿ ಮೂಲಕ.
*ಅನಾಥರ ಗುರುತಿಸಿ ಪಂಚಾಯಿತಿ ಮೂಲಕ ಊಟ. ತಂದೆ ತಾಯಿ ಇಬ್ಬರೂ ಪಾಸಿಟಿವ್ ಆಗಿದ್ದು ಮಗು ನೆಗೆಟ್ಯೂ ಆಗಿದ್ದರೆ ಮಕ್ಕಳ ಆರೈಕೆ ವ್ಯವಸ್ಥೆ. ಮನೆಯಲ್ಲಿ ವ್ಯವಸ್ಥೆ ಇಲ್ಲದವರಿಗೆ ಕೋವಿಡ್ ಕೇರ್ ಸೆಂಟರಿಗೆ ದಾಖಲು. ಅಗತ್ಯ ಬಿದ್ದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್, ಯಾವುದೇ ಸಭೆ ಸಮಾರಂಭಗಳು ನಡೆಯದಂತೆ ನೋಡಿಕೊಳ್ಳುವುದು.

ಕರೋನಾ ವೈರಸ್ ಹಳ್ಳಿಯಲ್ಲಿ ಮತ್ತಷ್ಟು ವಿಸ್ತರಿಸದಂತೆ ತಡೆಯುವ ನಿಟ್ಟಿನಲ್ಲಿ ಗ್ರಾಪಂ ಟಾಸ್ಕ್‌ಪೋರ್ಸ್ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದ್ದು, ಹಳ್ಳಿಗಳಲ್ಲಿ ಕರೋನಾ ಸಂಖ್ಯೆ ಹೆಚ್ಚುತ್ತಿರುವದು ನೋಡಿದ ಗ್ರಾಪಂ ಕರೋನಾ ನಿರ್ಮೂಲನಾ ಸಮಿತಿ ಲಾಕ್‌ಡೌನ್ ಮಾಡಿಕೊಳ್ಳುತ್ತಿದೆ. ಈಗಾಗಲೇ ಕೆಲವು ಗ್ರಾಮಗಳು ಲಾಕ್‌ಡೌನ್ ವಿಧಿಸಿಕೊಂಡಿದ್ದು, ಮತ್ತಷ್ಟು ಗ್ರಾಮಗಳು ಲಾಕ್‌ಡೌನ್ ಮಾಡಿಕೊಂಡರೂ ಅಚ್ಚರಿಯಲ್ಲ. ಕರೋನಾ ಪಾಸಿಟಿವ್ ಯಾವ ಗ್ರಾಮದಲ್ಲಿ 21ದಿನಗಳ ಕಾಲ ಕಾಣಿಸಿಕೊಳ್ಳುವುದಿಲ್ಲವೋ ಅಂತಾ ಗ್ರಾಮಗಳಿಗೆ ಬಹುಮಾನ ಕೊಡುವ ಪ್ರಸ್ತಾವನೆ ಕೂಡಾ ಇದೆ.
– ಕೇಶವ ಶೆಟ್ಟಿಗಾರ್, ಇ‌ಒ, ಕುಂದಾಪುರ ತಾಲೂಕು ಪಂಚಾಯಿತಿ.

Comments are closed.