ಕರಾವಳಿ

ಸೋಂಕಿತರ ಮನೆಗಳಿಗೆ ಕೋವಿಡ್ ಸ್ಟಿಕರ್ ಕಡ್ಡಾಯ ಹಾಗೂ ಕೋವಿಡ್ ಕಿಟ್‍ ನೀಡಲು ಶಾಸಕ ಭರತ್ ಶೆಟ್ಟಿ ಸೂಚನೆ

Pinterest LinkedIn Tumblr

ಮಂಗಳೂರು, ಮೇ 11 : ಕೋವಿಡ್ ಸೋಂಕಿತರ ಮನೆಗಳಿಗೆ ಕೋವಿಡ್ ಸ್ಟಿಕರ್‍ಗಳನ್ನು ಕಡ್ಡಾಯವಾಗಿ ಹಾಕಬೇಕು ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನುಕೋವಿಡ್ ಪರೀಕ್ಷೆ ಮಾಡಿಸುವಂತೆ ಆಯಾಯಾ ವಾರ್ಡ್‍ನ ಕಾರ್ಪೋರೇಟರ್‍ಗಳು ಹಾಗೂ ತಾಲೂಕು ವೈದ್ಯಾದಿಕಾರಿಗಳು ನೋಡಿಕೊಳ್ಳಬೇಕು ಎಂದು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ ತಿಳಿಸಿದರು.

ಅವರು ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಕೋವಿಡ್ ಸೋಂಕು ಹರಡುವಿಕೆಯ ನಿಯಂತ್ರಣದ ಬಗ್ಗೆ ಮಹಾನಗರ ಪಾಲಿಕೆ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಕೊರೊನಾ ಸೋಂಕಿತರ ಮನೆಗಳಲ್ಲಿ ರೋಗಿಗೆ ಪ್ರತ್ಯೇಕಕೊಠಡಿ, ಶೌಚಾಲಯ ವ್ಯವಸ್ಥೆಇರುವುದನ್ನು ಆಯಾ ವಾರ್ಡ್‍ನ ಆಶಾಕಾರ್ಯಕರ್ತೆಯರು ಮಾಹಿತಿಗಳನ್ನು ತಿಳಿದುಕೊಳ್ಳಬೇಕು.ಏನಾದರೂ ಆ ಮನೆಗಳಲ್ಲಿ ವ್ಯವಸ್ಥೆಇಲ್ಲದಿರುವುದುಕಂಡುಬಂದಲ್ಲಿತಕ್ಷಣಕೋವಿಡ್‍ಕೇರ್ ಸೆಂಟರ್‍ಗಳಿಗೆ ದಾಖಲಾಗುವಂತೆ ತಿಳಿಸಬೇಕು ಎಂದರು.

ಕಾರ್ಪೋರೇಟರ್‍ಗಳ ತಮ್ಮ ವಾರ್ಡ್‍ಗಳಲ್ಲಿ ಶಾಲೆಗಳು, ವಿದ್ಯಾರ್ಥಿನಿಲಯಗಳು ಮತ್ತುಇನ್ನಿತರ ಜಾಗಗಳನ್ನು ಬಳಸಿಕೊಂಡು ಕೋವಿಡ್‍ಕೇರ್ ಸೆಂಟರ್‍ಗಳನ್ನಾಗಿ ಮಾರ್ಪಾಡು ಮಾಡಿಕೊಂಡು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಯೋಚಿಸಬೇಕು ಎಂದ ಅವರು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಸೋಂಕಿತರಿಗೆ ಕೋವಿಡ್ ಕಿಟ್‍ಗಳ ಸೌಲಭ್ಯವನ್ನು ನೀಡಬೇಕು ಎಂದರು.

ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಶಾಸಕ ವೇದವ್ಯಾಸಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ. ವಿ, ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಉಪಮೇಯರ್ ಸುಮಂಗಳಾ ರಾವ್, ಡಿಸಿಪಿ ಹರಿರಾಂ ಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.