ಕರಾವಳಿ

ಕಾಪುವಿನ ಪೊಲಿಪು ಎಂಬಲ್ಲಿ ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

Pinterest LinkedIn Tumblr

ಉಡುಪಿ: ಕಾಪು ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಶನ್ ವತಿಯಿಂದ ಗಲ್ಫ್ ಸಮತಿ ಸಹಕಾರದೊಂದಿಗೆ ಪೊಲಿಪು ಜಮಾಅತ್ ವ್ಯಾಪ್ತಿಯ ಹಾಗೂ ಪುರಸಭೆಯ ಸ್ಥಳೀಯ ವಾರ್ಡ್ನ ನಾಗರಿಕರ ತುರ್ತುಚಿಕಿತ್ಸೆಗೆ ಉಚಿತವಾಗಿ ನೀಡಲು ಆಕ್ಸಿಜನ್ ಸಿಲಿಂಡರನ್ನು ಸಂಸ್ಥೆಯ ಕಛೇರಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಕಾಪು ಪೊಲಿಪು ಮೊಹಲ್ಲಾದ ಖಾಝಿ ಪಿ.ಬಿ.ಅಹಮದ್ ಮುಸ್ಲಿಯಾರ್ ದುಆದೊಂದಿಗೆ ಈ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಾಪು ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯಾಧಿಕಾರಿ ಡಾ.ಸುಬ್ರಾಯ ಕಾಮತ್ ಹಾಗೂ ಕಾಪು ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಗೋಪಾಲ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆಯ ಅಧ್ಯಕ್ಷ ಬಶೀರ್ ಜನಪ್ರಿಯ ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಖತೀಬ್ ಇರ್ಷಾದ್ ಸಅದಿ, ಸಂಸ್ಥೆಯ ಮಾಜಿ ಅಧ್ಯಕ್ಷ ಅಕ್ರಂ ಗುಡ್ವಿಲ್, ಸಲಹೆಗಾರರಾದ ಕೆ.ಎಂ.ರಝಾಕ್, ಉಪಾಧ್ಯಕ್ಷ ಅಶ್ರಫ್ ಮತ್ರಿ, ಕಾರ್ಯದರ್ಶಿ ಜಲೀಲ್, ಕೋಶಾಧಿಕಾರಿ ಅಬ್ದುಲ್ ಅಝೀಝ್ ಮೊದಲಾದವರು ಉಪಸ್ಥಿತರಿದ್ದರು.

Comments are closed.