ಕರಾವಳಿ

ಜಿಲ್ಲೆಯ ಕೊವೀಡ್ ನಿರ್ವಹಣೆಗೆ ಸಂಸದ ಕಟೀಲ್‌ ಅವರಿಂದ ರೂ. 2.50 ಕೋಟಿ ಅನುದಾನ

Pinterest LinkedIn Tumblr

ಮಂಗಳೂರು, ಮೇ.11 : ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಈ ಸಾಲಿನಲ್ಲಿ ಬಂದಂತಹ ಸಂಸದರ ಪ್ರದೇಶಾಭಿವೃದ್ಧಿಯ ಸಂಪೂರ್ಣ ಅನುದಾನ ರೂಪಾಯಿ ಎರಡೂವರೆ ಕೋಟಿಗಳನ್ನು ಕೋವಿಡ್ 19 ನಿರ್ವಹಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಮಿಕ ರೋಗವನ್ನು ಎದುರಿಸಲು ಬೇಕಾದ ವೈದ್ಯಕೀಯ ಪರಿಕರಗಳು ಇತ್ಯಾದಿಗಳನ್ನು ಅಳವಡಿಸಲು ಈ ಅನುದಾನ ಉಪಯೋಗಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ಸಂಸದರ ಆಪ್ತ ಕಾರ್ಯದರ್ಶಿಗಳು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.