
ಮಂಗಳೂರು, ಮೇ 11 : ಇಂದು ಚಂದ್ರದರ್ಶನವಾಗದ ಕಾರಣ ರಮಳಾನ್ ಚಾಂದ್ 30 (ಬುಧವಾರ) ಪೂರ್ತಿಗೊಳಿಸಿ “ಶವ್ವಾಳ್ ಚಾಂದ್ 01 ಮೇ 13 ಗುರುವಾರ ಈದುಲ್ ಫಿತರ್” ಆಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರವರು ತಿಳಿಸಿರುತ್ತಾರೆ.
ಸರಕಾರ ಹಾಗೂ ಜಿಲ್ಲಾಡಳಿತ ದ ಮಾರ್ಗಸೂಚಿ ಅನುಸರಿಸಿ, ಕೊರೋನಾ ವಿರುದ್ದದ ಜಾಗೃತಿಯಲ್ಲಿ ಎಲ್ಲರೂ ಕೈ ಜೋಡಿಸಿ ಸರಳವಾಗಿ ಈದುಲ್ ಫಿತರ್ ಹಬ್ಬ ಆಚರಿಸುವಂತೆ,ಖಾಝಿ ಉಸ್ತಾದರವರು ಕರೆ ನೀಡಿರುತ್ತಾರೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ & ಈದ್ಗಾ ಮಸೀದಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಇವರು ಮಾಧ್ಯಮ ಹೇಳಿಕೆ ನೀಡಿದ್ದಾರೆ.
ನಾಳೆ ಉಪವಾಸ ವೃತ ಮುಂದುವರಿಕೆ – ಮಂಗಳೂರು ಖಾಝಿ ಮಾಹಿತಿ : ಕೆ.ಅಶ್ರಫ್
ನಾಳೆ ತಾರೀಖು 12 ಮೇ, ಬುಧವಾರ ಉಪವಾಸ ವೃತ ಮುಂದುವರಿಕೆ ಮಾಡಲು ಮಂಗಳೂರು ಕೇಂದ್ರ ಜೀನತ್ ಭಕ್ಷ್ ಜುಮ್ಮಾ ಮಸೀದಿ ಸ್ಥಾನೀಯ ಖಾಝಿ ತೋಕೆ ಅಹ್ಮದ್ ಮುಸ್ಲಿಯಾರ್ ರವರು ಮಾಹಿತಿ ನೀಡಿರುತ್ತಾರೆ ಎಂದು ಕೇಂದ್ರ ಜುಮ್ಮಾ ಮಸೀದಿ ಮಂಗಳೂರು ಇದರ ಉಪಾಧ್ಯಕ್ಷರು ಹಾಗೂ ಮಾಜಿ ಮೇಯರ್ ಕೆ.ಅಶ್ರಫ್ ತಿಳಿಸಿದ್ದಾರೆ.
Comments are closed.