ಕರಾವಳಿ

ಮಹಿಳೆಯರಿಬ್ಬರು ನೇತ್ರಾವತಿ ಸೇತುವೆಯ ಮೇಲಿಂದ ಕಸ ಎಸೆಯುವ ವಿಡಿಯೋ ವೈರಲ್ : ವ್ಯಾಪಕ ಆಕ್ರೋಷ

Pinterest LinkedIn Tumblr

ಮಂಗಳೂರು, ಮೇ. 01 : ಮಂಗಳೂರು ಹಾಗೂ ಉಳ್ಳಾಲ ಮಧ್ಯೆ ಇರುವ ನೇತ್ರಾವತಿ ನದಿ ತೀರವನ್ನು ಮಾಲಿನ್ಯ ಮಾಡುವ ಕಾರ್ಯ ಹಲವು ಸಮಯಗಳಿಂದ ನಡೆಯುತ್ತಿದ್ದರೂ ಈ ಬಗ್ಗೆ ಯಾವೂದೇ ಕ್ರಮ ತೆಗೆದು ಕೊಳ್ಳದೆ ಇದ್ದುದ್ದರಿಂದ ನೇತ್ರಾವತಿ ಸೇತುವೆಯ ಮೇಲಿನಿಂದ ಕಸ ಎಸೆಯುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.

ಇದೀಗ ಕಾರಿನಲ್ಲಿ ಬಂದ ಮಹಿಳೆಯರಿಬ್ಬರು ನೇತ್ರಾವತಿ ಸೇತುವೆಯ ಮೇಲಿಂದ ಕಸ ಎಸೆಯುವ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರಿಸರ ಪ್ರೇಮಿಗಳ ಆಕ್ರೋಷಕ್ಕೆ ಕಾರಣವಾಗಿದೆ.

ನೇತ್ರಾವತಿ ಸೇತುವೆ ಮೇಲಿನಿಂದ ನದಿಗೆ ಹಾರಿ ಸರಣಿ ಆತ್ಮಹತ್ಯೆ ನಡೆದ ಬಳಿಕ ಸೇತುವೆಗೆ ಎತ್ತರದ ಬೇಲಿ ಹಾಕಲಾಗಿದೆ. ಇದೀಗ ಆತ್ಮಹತ್ಯೆ ಪ್ರಮಾಣ ಕಡೆಮೆಯಾಗಿದೆ. ಆದರೆ ಆದರೆ ನದಿಗೆ ಕಸ ಎಸೆಯುವುದು ಮಾತ್ರ ಇನ್ನೂ ನಿಂತಿಲ್ಲ.

ಬೆಂಗಳೂರು ನೊಂದಣಿ ( ಕೆಎ 03 ಎನ್‌ಬಿ 4648) ಇರುವ ಕಾರಿನಲ್ಲಿ ಬಂದ ಸುಶಿಕ್ಷಿತರಂತೆ ಕಾಣುವ ಇಬ್ಬರು ಮಹಿಳೆಯರು ನೇತ್ರಾವತಿ ಸೇತುವೆ ಮೇಲಿಂದ ಕಸ ತುಂಬಿದ ಪ್ಲಾಸ್ಟಿಕ್ ಅನ್ನು ನೇತ್ರಾವತಿ ನದಿಗೆ ಎಸೆಯುವ ದೃಶ್ಯ ಹಿಂಬದಿಯಲ್ಲಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕ್ಯಾಮರದಲ್ಲಿ ರೆಕಾರ್ಡ್ ಆಗಿದೆ. ಇದೀಗ ಇದು ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದ್ದು, ಈ ಇಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಆಕ್ರೋಷ ವ್ಯಕ್ತವಾಗಿದೆ.

Comments are closed.