ಕರಾವಳಿ

ಮೊಬೈಲ್‌ನಲ್ಲಿ ಮಾತನಾಡುತ್ತಾ‌ ಕಾರು ಡ್ರೈವ್ ಮಾಡ್ತಿದ್ದ ಮಹಿಳೆಗೆ ದಂಡ ಕಟ್ಟಲು ಹೇಳಿದ ಉಡುಪಿ ಟ್ರಾಫಿಕ್ ಪಿಎಸ್ಐಗೆ ಅವಾಜ್..!

Pinterest LinkedIn Tumblr

ಉಡುಪಿ‌: ಕಾರು‌ ಚಲಾಯಿಸುವ ವೇಳೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ಮಹಿಳೆಯೊಬ್ಬರಿಗೆ ದಂಡ‌ ಕಟ್ಟುವಂತೆ ಹೇಳಿದ ಟ್ರಾಫಿಕ್ ಪಿಎಸ್ಐಗೆ ಮಹಿಳೆ ಆವಾಜ್ ಹಾಕಿದ ಘಟನೆ ಉಡುಪಿ‌ ನಗರದ ಕ್ಲಾಕ್ ಟವರ್ ಬಳಿ ನಡೆದಿದೆ.

ಕಾರು ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತಾನಾಡುತ್ತಾ ಹೋದ ಮಹಿಳೆಯನ್ನು ತಡೆದು, ಕಾರು ಬದಿಗೆ ನಿಲ್ಲಿಸಿ ಫೋನಿನಲ್ಲಿ ಮಾತಾಡಿ ಎಂದು ಟ್ರಾಪಿಕ್ ಎಸ್ಐ ಅಬ್ದುಲ್ ಖಾದರ್ ಹೇಳಿದ್ದಾರೆ.

ಟ್ರಾಫಿಕ್ ಪೊಲೀಸ್ ಅಧಿಕಾರಿ ಜೊತೆ ಮಾತಾನಾಡುವ ವೇಳೆ, ನನಗೆ ರೈಟ್ಸ್ ಇದೆ. ನೀವು ಸುಮ್ಮನೆ ಕೂಗಾಡಬೇಡಿ.. ಅಧಿಕಾರ ಇದೆಯೆಂದು ದುರುಪಯೋಗ ಮಾಡಿಕೊಳ್ಳುತ್ತಿದ್ದಿರಿ. ಗೂಗಲ್ ಪೇ ಹೇಳಿ ದುಡ್ಡು ಕಟ್ಟಿ ಹೋಗುತ್ತೇನೆ. ಮತ್ತೆ ಫೋನಿನಲ್ಲಿ ಮಾತಾಡಿಕೊಂಡು ಹೋಗುತ್ತೇನೆ ಎಂದು ಏರು ದನಿಯಲ್ಲೆ ಪಿಎಸ್ಐ ಜೊತೆ ಮಾತನಾಡಿದ್ದಾರೆ. ಬಳಿಕ ಪೊಲೀಸರು 3000 ದಂಡ ಕಟ್ಟಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿದೆ.

 

Comments are closed.