ಕರ್ನಾಟಕ

ಗಾಡ್ ಫಾದರ್ ಇಲ್ಲದೆ ಈ‌ ಮಟ್ಟಕ್ಕೆ ಬೆಳೆದಿದ್ದು ರಾಜಕೀಯ ಷಡ್ಯಂತ್ರಕ್ಕೆ ತೇಜೋವಧೆ ಆಗೋದು ಬೇಡ: ಸಚಿವ ಬಿ.ಸಿ ಪಾಟೀಲ್

Pinterest LinkedIn Tumblr

ಹಾವೇರಿ: ಒಬ್ಬ ರೈತನ ಮಗನಾಗಿ ಯಾವುದೇ ಗಾಡ್ ಫಾದರ್ ಇಲ್ಲದೇ ಇಷ್ಟರ ಮಟ್ಟಕ್ಕೆ ಬೆಳೆದು ಬಂದಿದ್ದು ಬಹಳಷ್ಟು ಜನರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಆದರೆ ಯಾವುದೋ ಕುತಂತ್ರ, ಮತ್ತು ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹೆಸರನ್ನು ವಿನಾಕಾರಣ ಅದೂ ಸತ್ಯಾಸತ್ಯತೆ ಅರಿಯದೆ ತೇಜೋವಧೆ ಆಗಬಾರದು ಎಂಬ ದೃಷ್ಟಿಯಲ್ಲಿ, ಮುನ್ನೆಚ್ಚರಿಕೆಯ ಕ್ರಮವಾಗಿ ಕಾನೂನಿನ ಮೊರೆ ಹೋಗಲಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

ತಮ್ಮ ವಿರುದ್ಧ ಯಾವುದೇ ರೀತಿ ಅವಹೇಳನಕಾರಿ ಮತ್ತು ಮಾನಹಾನಿಗೆ ಸಂಬಂಧಿಸಿದಂತೆ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಈ ಸ್ಪಷ್ಟನೆ ನೀಡಿದ್ದಾರೆ.

‘ಆದ್ದರಿಂದಲೇ ನಾವೆಲ್ಲರೂ ನಮ್ಮ ವಿರುದ್ಧ ಸತ್ಯಾಸತ್ಯತೆ ಅರಿಯದೆ ನಮ್ಮ ವಿರುದ್ಧ ಪ್ರಸಾರ ವಾಗಬಾರದು ಎಂದು ಕೋರ್ಟಿಗೆ ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದೇವೆ. ಸತ್ಯಮೇವ ಜಯತೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸಚಿವ ಬಿ ಸಿ ಪಾಟೀಲ್ ಬರೆದುಕೊಂಡಿದ್ದಾರೆ.

ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ರಾಜ್ಯ ಸರ್ಕಾರದ ಆರು ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಆರು ಸಚಿವರ ನಡೆ ತೀವ್ರ ಕುತೂಹಲ ಮೂಡಿಸಿದ್ದು, ಚರ್ಚೆಗೂ ಕಾರಣವಾಗಿತ್ತು. ವಕೀಲ ಚೆನ್ನಬಸಪ್ಪ ಅವರ ಮೂಲಕ ಸಿಟಿ ಸಿವಿಲ್ ಕೋರ್ಟ್​ನಲ್ಲಿ 6 ಸಚಿವರು ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಹೋದ ಸಚಿವರಾದ ಶಿವರಾಮ್ ಹೆಬ್ಬಾರ್, ಎಸ್​.ಟಿ ಸೋಮಶೇಖರ್​, ನಾರಾಯಣ ಗೌಡ, ಭೈರತಿ ಬಸವರಾಜ್​, ಬಿ.ಸಿ ಪಾಟೀಲ್​, ಡಾ. ಕೆ. ಸುಧಾಕರ್​​ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ ಮೊರೆ ಹೋಗಿದ್ದಾರೆ.

67 ಸುದ್ದಿ ಸಂಸ್ಥೆಗಳನ್ನು ಪ್ರತಿವಾದಿಯಾಗಿ ಮಾಡಲಾಗಿದೆ. ಇನ್ನು‌ ಕೆಲವು ಸಿಡಿ ಬಿಡುಗಡೆ ಸಾಧ್ಯತೆಯ ಹೇಳಿಕೆ ನೀಡಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಯನ್ನು 68ನೇ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅಲ್ಲದೆ ಫೇಸ್ ಬುಕ್, ಟ್ವಿಟರ್, ವಾಟ್ಸಪ್, ಯೂಟ್ಯೂಬ್ ಅನ್ನು ಸಹ ಸಚಿವರ ಪರ ವಕೀಲರು ಪ್ರತಿವಾದಿಯನ್ನಾಗಿ ಮಾಡಿದ್ದಾರೆ.

 

Comments are closed.