ಕರಾವಳಿ

ಹಾಡಹಗಲಿನಲ್ಲೇ ಜ್ಯುವೆಲ್ಲರಿ ಶಾಪ್‌‌ನಿಂದ ಚಿನ್ನ ಎಗರಿಸಿ ಪರಾರಿ: ಬೆನ್ನಟ್ಟಿ ಕಳ್ಳನನ್ನು ಹಿಡಿದ ಮಾಲ್ಹಕರು

Pinterest LinkedIn Tumblr

ಮಂಗಳೂರು, ಮಾರ್ಚ್.06: ಹಾಡಹಗಲಿನಲ್ಲೇ ಜ್ಯುವೆಲ್ಲರಿ ಶಾಪ್‌‌ನಿಂದ ಚಿನ್ನ ಎಗರಿಸಿ ಪರಾರಿ ಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರ ಸಹಾಯದಿಂದ ಜ್ಯುವೆಲ್ಲರಿ ಮಾಲಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರಿನ ಕಾರ್‌ಸ್ಟ್ರೀಟ್ ನಲ್ಲಿ ನಡೆದಿದೆ.

ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕಾರಸ್ಟ್ರೀಟ್ ನಲ್ಲಿರುವ ಅರುಣ್ ಜಿ. ಶೇಟ್ ಎಂಬವರ ಮಾಲಕತ್ವದ ಅರುಣ್ ಜ್ಯುವೆಲ್ಲರ್‍ಸ್ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದ ಆಗಂತುಕ ಚಿನ್ನ ಖರೀದಿಸುವ ನಾಟಕವಾಡಿ ಚಿನ್ನದ ಉಂಗುರವನ್ನು ಬಾಯೊಳಗೆ ಹಾಕಿ ಪರಾರಿಯಾಗಿದ್ದಾನೆ.

ಕಳ್ಳತನ ಮಾಡಿ ಓಡಿ ಹೋಗುವಾಗ ಇದನ್ನು ಗಮನಿಸಿದ ಅಂಗಡಿ ಮಾಲೀಕ ಅರುಣ್ ಜಿ. ಶೇಟ್ ಅವರು ಕಳ್ಳನನ್ನು ಅಟ್ಟಿಸಿಕೊಂಡು ಹೋಗಿ ಸಾರ್ವಜನಿಕರ ಸಹಾಯದಿಂದ ಕಳ್ಳನನ್ನು ಹಿಡಿದಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯೂ ಸೆರೆಯಾಗಿದೆ.

ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.