ಕರಾವಳಿ

‘ಬ್ರಹ್ಮಶ್ರೀ’ ಪ್ರಶಸ್ತಿ ನಿರಾಕರಿಸಿದ ಸಂಸದ ಕಟೀಲ್ : ಈ ಪ್ರಶಸ್ತಿಗೆ ಏಕೈಕ ಅರ್ಹ ವ್ಯಕ್ತಿ ಪೂಜಾರಿ ಎಂದ ನಳಿನ್ ಕುಮಾರ್

Pinterest LinkedIn Tumblr

ಮಂಗಳೂರು/ ಉಳ್ಳಾಲ : ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೊಡಮಾಡಲಿದ್ದ ‘ಬ್ರಹ್ಮಶ್ರೀ’ ಪ್ರಶಸ್ತಿಯನ್ನು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ನಿರಾಕರಿಸಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ‘ಮೆರುಗು-2021’ ಕಾರ್ಯಕ್ರಮದಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ‘ಬ್ರಹ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿತವಾಗಿತ್ತು.

ಆದರೆ ಸನ್ಮಾನ, ಪ್ರಶಸ್ತಿ ಸ್ವೀಕರಿಸಲು ನಾನು ಅರ್ಹ ವ್ಯಕ್ತಿಯಲ್ಲ. ಪ್ರಶಸ್ತಿ ಸ್ವೀಕರಿಸಲು ಕನಿಷ್ಠ 60 ವರ್ಷ ಆಗಬೇಕು.ನಾನಿನ್ನೂ ಯುವಕ.ನಾನು ಅಷ್ಟು ಎತ್ತರಕ್ಕೆ ಏರಿಲ್ಲ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆಯಿಂದ ಅಂಬಿಕಾ ರಸ್ತೆಯಲ್ಲಿ ನಡೆದ ‘ಮೆರುಗು-2021’ ನೃತ್ಯ ಸ್ಪರ್ಧೆ, ಆಯುಷ್ಮಾನ್ ಕಾರ್ಡ್ ಮತ್ತು ಶೈಕ್ಷಣಿಕ ಶಾಲಾ ಶುಲ್ಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಹ್ಮ ಶ್ರೀ ಪ್ರಶಸ್ತಿಗೆ ಅರ್ಹರಾದ ಏಕೈಕ ವ್ಯಕ್ತಿಯೆಂದರೆ ಅದು ಜನಾರ್ದನ ಪೂಜಾರಿ ಮಾತ್ರ. ರಾಜಕೀಯದಲ್ಲಿ ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತಕ್ಕೆ ಅರ್ಹರಾದ ವ್ಯಕ್ತಿ ಜನಾರ್ದನ ಪೂಜಾರಿ ಮಾತ್ರ. ರಾಜಕೀಯ ಕ್ಷೇತ್ರದಲ್ಲಿ ‘ಬ್ರಹ್ಮಶ್ರೀ’ ಪ್ರಶಸ್ತಿ ಪಡೆಯಲು ಅವರಿಗೆ ಮಾತ್ರ ಅರ್ಹತೆ ಇದೆ. ನಾನು ಪ್ರಶಸ್ತಿ, ಸನ್ಮಾನಗಳನ್ನು ಸ್ವೀಕರಿಸುವುದಿಲ್ಲ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಕೆ.ಟಿ ಸುವರ್ಣ ಅವರು ಈ ಕಾರ್ಯಕ್ರಮ ಉದ್ಘಾಟನೆಗೆ ಕರೆದಿದ್ದರು. ಪತ್ರಿಕೆಯಲ್ಲಿ ನೋಡಿದಾಗ ನಳಿನ್ ಗೆ ಬ್ರಹ್ಮ ಶ್ರೀ ಪ್ರಶಸ್ತಿ ಎನ್ನುವ ಬರಹ ಇತ್ತು. ತಕ್ಷಣ ಅವರನ್ನು ಸಂಪರ್ಕಿಸಿ ಸನ್ಮಾನ, ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಮನವಿ ಮಾಡಿದ್ದೆ ಎಂದರು.

ಸನ್ಮಾನ, ಪ್ರಶಸ್ತಿ ಸ್ವೀಕರಿಸಲು ನಾನು ಅರ್ಹ ವ್ಯಕ್ತಿಯಲ್ಲ. ನಾನಿನ್ನೂ ಯುವಕ. ಪೂಜಾರಿಯವರಷ್ಟು ಎತ್ತರಕ್ಕೆ ಬೆಳೆಯಲು ಬಹಳಷ್ಟು ಕಾಲಾವಕಾಶ ಬೇಕು. ಬ್ರಹ್ಮಶ್ರೀ ಪ್ರಶಸ್ತಿ ಪಡೆಯಲು 65 ವರ್ಷವಾದರೂ ದಾಟಬೇಕು.

ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನೀಡುವುದಾದರೆ ನಾರಾಯಣ ಗುರುಗಳ ಆದರ್ಶಗಳನ್ನು ಅಳವಡಿಸಿ ಸರಳ, ಭ್ರಷ್ಟಾಚಾರರಹಿತ ಆಡಳಿತ ಮಾಡಿವರಿಗೆ ನೀಡಿದರೆ ಉತ್ತಮ. ನಾನು ಯಾವ ಜಾತಿಗೂ ಸೀಮಿತನಲ್ಲ. ಹಿಂದುತ್ವಕಾಗಿ ಮಾತ್ರ ಸೀಮಿತ ನನ್ನ ಸಂಸದ ಸ್ಥಾನ ಹೋದರೂ ಹಿಂದುತ್ವ ಬಿಡಲಾರೆ ಎಂದು ಹೇಳಿದರು.

Comments are closed.