ಕರಾವಳಿ

ಸುರತ್ಕಲ್ ವಸತಿಗ್ರಹದಲ್ಲಿ ವೇಶ್ಯಾವಾಟಿಕೆ ದಂಧೆ: ಇಬ್ಬರ ಸೆರೆ-ಮಹಿಳೆಯ ರಕ್ಷಣೆ

Pinterest LinkedIn Tumblr

ಮಂಗಳೂರು, ಮಾರ್ಚ್. 01 : ಮಂಗಳೂರು ಹೊರವಲಯದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದ ಬಿ ಎ ಎಸ್ ಎಫ್ ಫ್ಯಾಕ್ಟರಿಯ ಎದುರುಗಡೆಯ ಫೆರಾವೊ ಕಾಂಪ್ಲೇಕ್ಸ್ ನಲ್ಲಿರುವ ಫೆರಾವೊ ಲಾಡ್ಜಿಂಗ್  & ಬೋರ್ಡಿಂಗ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಳೆಯಂಗಡಿಯ ತೋಕುರು ನಿವಾಸಿ ತೋಕೂರು ಹರೀಶ್ (42) , ಹಾಗೂ ಬಂಟ್ವಾಳದ ದಡ್ಡಲ್ ಕಾಡ್, ಮೂಡ ನಡಗೋಡು ಗ್ರಾಮದ ನಿವಾಸಿ ಲೋಕನಾಥ್ ಫೂಜಾರಿ @ ನವೀನ್ (42) ಬಂಧಿತ ಆರೋಪಿಗಳು.

ಆರೋಪಿಗಳು ಬಾಳ ಗ್ರಾಮದ ಬಿ ಎ ಎಸ್ ಎಫ್ ಫ್ಯಾಕ್ಟರಿಯ ಎದುರುಗಡೆಯ ಫೆರಾವೊ ಕಾಂಪ್ಲೇಕ್ಸ್ ನಲ್ಲಿರುವ ಫೆರಾವೊ ವಸತಿಗ್ರಹದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಯಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಬೆಂಗಳೂರು ಉತ್ತರಹಳ್ಳಿಯ ನಿವಾಸಿ ಸಂತ್ರಸ್ತೆ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.