ಕರ್ನಾಟಕ

ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ‘ಹಿರೋ’ ರಿಷಬ್ ಶೆಟ್ಟಿಗೆ ಗಾಯ: ತಪ್ಪಿದ ಅನಾಹುತ

Pinterest LinkedIn Tumblr

ಹಾಸನ: ಈ ವಾರ ಬಿಡುಗಡೆಗೊಳ್ಳಲಿರುವ ‘ಹೀರೋ’ ಸಿನೆಮಾದ ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸದ್ಯ ವಿಡಿಯೋ ವೈರಲ್ ಆಗಿದೆ.

ರಿಷಬ್ ಶೆಟ್ಟಿ ಹಾಗೂ ನಟಿ ಗಾನವಿ ಸಾಹಸ ದೃಶ್ಯ ಚಿತ್ರೀಕರಣವೊಂದಕ್ಕೆ ಪೆಟ್ರೋಲ್ ಬಾಂಬ್ ಬಳಸಲಾಗಿತ್ತು. ಮೊದಲಿಗೆ ಬಾಂಬ್ ಸಿಡಿದಾಗ ಏನು ಆಗಿರಲಿಲ್ಲ. ಆದರೆ ಎರಡನೇ ಬಾಂಬ್ ಸ್ಪೋಟಗೊಂಡಾಗ ದೊಡ್ಡ ಬೆಂಕಿ ಕಾಣಿಸಿಕೊಂಡಿತ್ತು. ರಿಷಬ್‌ ಕೊಂಚ ಯಾಮಾರಿದ್ರೆ ದೊಡ್ಡ ಅಪಾಯ ಕಾದಿತ್ತು. ಇದರಿಂದ ರಿಷಬ್‌ ಕೂದಲು ಸುಟ್ಟಿದ್ದಲ್ಲದೆ ಬೆನ್ನಿಗೂ ಗಾಯವಾಗಿದೆ. ಸಾಕಷ್ಟು ಮುಂಜಾಗ್ರತ ಕ್ರಮ ತೆಗದುಕೊಂಡಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲ ಎನ್ನಲಾಗಿದೆ.

ಲಾಕ್‌ಡೌನ್‌ ವೇಳೆ ರಿಷಬ್ ಶೆಟ್ಟಿ ಏನಾದರೂ ಮಾಡಲೇ ಬೇಕೆಂದು ಅತಿ ಕಡಿಮೆ ಅವಧಿಯಲ್ಲಿ ‘ಹೀರೋ’ ಸಿನಿಮಾ ರೆಡಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಚಿತ್ರದ ಟೈಲರ್‌ ರಿಲೀಸ್‌ ಆಗಿತ್ತು. ಬಹು ನಿರೀಕ್ಷಿತ ಚಿತ್ರ ‘ಹೀರೋ’ ಇದೇ ಮಾರ್ಚ್‌ 5ರಂದು ಬಿಡುಗಡೆಯಾಗುತ್ತಿದೆ.

Comments are closed.