ರಾಷ್ಟ್ರೀಯ

ಜನರಿಗೆ ಮತ್ತೊಂದು ಶಾಕ್ ಕೊಟ್ಟ ಕೇಂದ್ರ: ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ. ಏರಿಕೆ…!

Pinterest LinkedIn Tumblr

ನವದೆಹಲಿ: ಬೆಲೆ ಏರಿಕೆ ಜನತೆಗೆ ನಿತ್ಯ ಶಾಕ್ ನೀಡುತ್ತಿದ್ದು ಕೇಂದ್ರ ಸರಕಾರ ಮಾ.1 ರಂದು ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಳ ಮಾಡಿದೆ.

ಮಾ.1 ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿಯೇತರ ಪ್ರತಿ ಸಿಲಿಂಡರ್ ದರ (14.2 ಕೆ.ಜಿ) 819 ರೂಪಾಯಿಯಾಗಿದೆ.

ಸಬ್ಸಿಡಿಯೇತರ ಎಲ್.ಪಿ.ಜಿ ಸಿಲಂಡರ್ ದರ ಪರಿಷ್ಕರಣೆ ಪ್ರತಿ ತಿಂಗಳು ನಡೆಯಲಿದ್ದು, ಪ್ರತಿ ತಿಂಗಳ ಮೊದಲ ದಿನ ದರ ಏರಿಕೆ ಜಾರಿಯಾಗಲಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆಯ ಪ್ರಕಾರ ದರ ಬದಲಾವಣೆಯಾಗಲಿದೆ. ಫೆಬ್ರವರಿ ತಿಂಗಳಲ್ಲಿ ಎಲ್ ಪಿಜಿ ಸಿಲಿಂಡರ್ ದರವನ್ನು ಮೂರು ಬಾರಿ ಏರಿಕೆ ಮಾಡಲಾಗಿತ್ತು.

ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿರುವಾಗಲೇ ಎಲ್ ಪಿಜಿ ದರ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಜೊತಗೆ ಗ್ಯಾಸ್ ಸಿಲಿಂಡರ್ ಬೆಲೆಯೂ ಸಹ ಹೆಚ್ಚಾಗುತ್ತಿರುವುದು ಜನಸಾಮಾನ್ಯರಿಗೆ ಹೊರೆಯಾಗಿದೆ.

Comments are closed.