ಕರಾವಳಿ

ಮಂಗಳೂರು-ಮೈಸೂರು ವಿಮಾನಯಾನ ಸೇವೆ ಆರಂಭ : ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ

Pinterest LinkedIn Tumblr

ಮೈಸೂರು : ಮಂಗಳೂರು-ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ಅಲಯನ್ಸ್‌ ಏರ್‌ ಸಂಸ್ಥೆಯ ಹೊಸ ವಿಮಾನಯಾನ ಸೇವೆ ಶುಕ್ರವಾರದಿಂದ ಆರಂಭವಾಗಿದೆ. ಮೈಸೂರು-ಮಂಗಳೂರು ನಡುವೆ ವಿಮಾನ ಸೇವೆಗೆ ಶುಕ್ರವಾರ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.

ಮೈಸೂರಿನಿಂದ ಬೆಳಗ್ಗೆ 10.42ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 11.22ಕ್ಕೆ ಮಂಗಳೂರು ತಲುಪಿದೆ. ಮಧ್ಯಾಹ್ನ12.55ಕ್ಕೆ ಮಂಗಳೂರಿನಿಂದ ಹೊರಟ ವಿಮಾನ 1.55ಕ್ಕೆ ಮೈಸೂರಿಗೆ ತಲುಪಿದೆ.. ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಸೇವೆ ಲಭ್ಯವಿದೆ.

ಕೇಂದ್ರದ ಮಹತ್ವದ ಉಡಾನ್‌ ಪರಿಕಲ್ಪನೆಯಡಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ವಿಮಾನ ವಾರದಲ್ಲಿ 4 ದಿನ ಸಂಚರಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ ಮತ್ತು ರವಿವಾರ ಈ ವಿಮಾನ ಸೇವೆ ಲಭ್ಯವಿರುತ್ತದೆ.

ಶುಕ್ರವಾರ ಬೆಳಗ್ಗೆ 10.42ಕ್ಕೆ ಮೈಸೂರಿನಿಂದ ಹೊರಟ ಮೊದಲ ವಿಮಾನವು 11.22ಕ್ಕೆ ಮಂಗಳೂರಿನಲ್ಲಿ ಬಂದಿಳಿದಿದೆ. ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ “ವಾಟರ್‌ ಸೆಲ್ಯೂಟ್‌’ ಮೂಲಕ ಸ್ವಾಗತ ಕೋರಲಾಯಿತು.

ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ.ರಾವ್‌, ಅದಾನಿ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ವಿಮಾನ ನಿಲ್ದಾಣದಲ್ಲಿ ಕೇಕ್‌ ಕಟ್‌ ಮಾಡಿ ಸಂಭ್ರಮಿಸಲಾಯಿತು.

ಮೈಸೂರಿನಿಂದ ಒಟ್ಟು 25 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದು, ಅಪರಾಹ್ನ 12.55ಕ್ಕೆ ಮಂಗಳೂರಿನಿಂದ ಹೊರಟ ವಿಮಾನದಲ್ಲಿ 31 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು.

Comments are closed.