ಕರಾವಳಿ

ಮುಂಬೈ ಕಲಾಸೌರಭದಿಂದ ‘ಕಾವ್ಯ ಚಿತ್ತಾರ’ : ಕವಿಗೋಷ್ಠಿ ,ಕಾವ್ಯ ಗಾಯನ -ನೃತ್ಯ – ಕುಂಚ ಸಂಗಮ 

Pinterest LinkedIn Tumblr

ಮಂಗಳೂರು : ಕಲಾ ಸೌರಭ ಮುಂಬೈ , ಸಂಗೀತ ಮತ್ತು ಸಾಂಸ್ಕೃತಿಕ ಘಟಕದ ವತಿಯಿಂದ ನಮ್ಮಕುಡ್ಲ ವಾಹಿನಿ ಸಹಯೋಗದಲ್ಲಿ ‘ ಕಾವ್ಯ ಚಿತ್ತಾರ ‘ ಕವಿಗೋಷ್ಠಿ – ಕಾವ್ಯಗಾಯನ – ನೃತ್ಯ -ಕುಂಚ ಸಂಗಮ ಕಾರ್ಯಕ್ರಮ ಮಂಗಳೂರಿನಲ್ಲಿ ಜರಗಿತು. ಇದರಲ್ಲಿ ಮುಂಬೈ ಮತ್ತು ಕರಾವಳಿ ಭಾಗದ ಪ್ರಸಿದ್ಧ ಕವಿಗಳು ಮತ್ತು ಸಂಗೀತ ಕಲಾವಿದರು ಭಾಗವಹಿಸಿದ್ದರು.

ಕವಿಗಳಾದ ನಂದಳಿಕೆ ನಾರಾಯಣ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ , ಎಂ.ಜಿ.ಹೆಗಡೆ, ಪರಮಾನಂದ ಸಾಲಿಯಾನ್, ಅಶೋಕ ಪಕ್ಕಳ, ಗಂಗಾಧರ ಪಣಿಯೂರು, ಸಂತು ಮುದ್ರಾಡಿ, ರೂಪಕಲಾ ಆಳ್ವ, ಅನಿತಾ ಪಿ. ಪೂಜಾರಿ ತಾಕೋಡೆ, ಸುಧಾ ನಾಗೇಶ್, ವಿಜಯಲಕ್ಷ್ಮಿ ಕಟೀಲು ,ಶೋಭಾರಾಣಿ ವಿನೋದ್, ಮಾಲತಿ ಶೆಟ್ಟಿ ಮಾಣೂರು ಸ್ವರಚಿತ ಕನ್ನಡ – ತುಳು ಕವನಗಳನ್ನು ವಾಚಿಸಿದರು.

ಗಾಯಕರಾದ ತೋನ್ಸೆ ಪುಷ್ಕಳ ಕುಮಾರ್ , ರವೀಂದ್ರ ಪ್ರಭು , ಸಂಗೀತ ಬಾಲಚಂದ್ರ , ಸೌಮ್ಯ ಭಟ್ ಕಟೀಲು , ಪದ್ಮನಾಭ ಸಸಿಹಿತ್ಲು, ಶೇಖರ ಸಸಿಹಿತ್ಲು, ರಮೇಶ ಸಾಲಿಯಾನ್,ಕು. ನಿರೀಕ್ಷಾ, ಕು.ಸಹನಾ ಕವಿತೆಗಳಿಗೆ ಸ್ವರ ಸಂಯೋಜಿಸಿ ಹಾಡಿದರು.

ಶೇಖರ ಸಸಿಹಿತ್ಲು ,ಸತೀಶ್ ಸುರತ್ಕಲ್, ರಂಜಿತ್ ರಾವ್, ದೀಪಕ್ ರಾಜ್ ಉಳ್ಳಾಲ , ನವಗಿರಿ ಗಣೇಶ್, ಮನೋಜ್ ರಾವ್ ಹಿನ್ನೆಲೆ ಸಂಗೀತ ನೀಡಿದರು . ಶಿವಾನಿ ಸುರತ್ಕಲ್ ನೃತ್ಯ ಹಾಗೂ ಮುರಳಿಧರ ಆಚಾರ್ ಆಲಂಕಾರು ಚಿತ್ರ ಕಲೆಗಳಲ್ಲಿ ಸಹಕರಿಸಿದರು. ಕವಿ – ಕಾವ್ಯ ಪರಿಚಯದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕವಿಗೋಷ್ಠಿಯನ್ನು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಮುಂಬಯಿಯ ಖ್ಯಾತ ಉದ್ಯಮಿ ಹಾಗೂ ಕಲಾ ಪೋಷಕರಾದ ದಿ.ಜಯ ಸಿ.ಸುವರ್ಣ ಅವರ ಕುರಿತು ಡಾ.ಸುನೀತಾ ಎಂ.ಶೆಟ್ಟಿ ಬರೆದ ಹಾಡಿನ ಪ್ರಸ್ತುತಿಯೊಂದಿಗೆ ಅವರಿಗೆ ಗೀತ ನಮನ ಸಲ್ಲಿಸಲಾಯ್ತು.

ಕಲಾ ಸೌರಭ ಅಧ್ಯಕ್ಷ ಪದ್ಮನಾಭ ಸಸಿಹಿತ್ಲು ಕಾರ್ಯಕ್ರಮ ಸಂಯೋಜಿಸಿದ್ದರು. ತೋನ್ಸೆ ಪುಷ್ಕಳ ಕುಮಾರ್ ಮತ್ತು ಸತೀಶ್ ಸುರತ್ಕಲ್ ಸಹಕರಿಸಿದರು.

Comments are closed.