ಕರಾವಳಿ

ಕುಲಾಲ ಸಮಾಜದ ಧೀಮಂತ ನಾಯಕ ಸುಜೀರ್ ಶ್ರೀಧರ್ ಕುಡುಪು ನಿಧನ

Pinterest LinkedIn Tumblr

ಮಂಗಳೂರು ಡಿಸೆಂಬರ್.12 : ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಮಾಜಿ ಅಧ್ಯಕ್ಷರು ಸುಜೀರ್ ಶ್ರೀಧರ್ ಕುಡುಪು(52) ಅವರು ಡಿಸೆಂಬರ್ 11ರಂದು ದೈವಾಧೀನರಾಗಿದ್ದಾರೆ,

ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ. ಆಡಳಿತ ಮೊಕ್ತೇಸರರಾಗಿ .ನೀರ್ ಮಾರ್ಗ ಕುಲಾಲ ಸಂಘದ ಸ್ಥಾಪಕ ಅಧ್ಯಕ್ಷರಾಗಿ .ರಾಜ್ಯ ಕರಾವಳಿ ಕುಂಬಾರ ಯುವ ವೇದಿಕೆಯ ಸದಸ್ಯರಾಗಿ . ಹೀಗೆ ಕುಲಾಲ ಸಮಾಜದ ವಿವಿಧ ಮಜಲುಗಳಲ್ಲಿ ಸಮಾಜ ಸೇವೆ ಮಾಡಿ ಜನಾನುರಾಗಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಸುಜೀರ್ ಕುಡುಪು ಅಸೌಖ್ಯದಿಂದ ನಿಧನ ಹೊಂದಿದರು

ಮೃತರ ಪತ್ನಿ. ಪುತ್ರ .ಪುತ್ರಿ. ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ

ಇವರ ನಿಧಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಕೃಷ್ಣ ಅತ್ತವರ. ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ ದಾಮೋದರ್. ವೀರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ. ವೀರನಾರಾಯಣ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್. ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಬಿ ಸುರೇಶ್ ಕುಲಾಲ್. ಕಾಸರಗೋಡು ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನಿಪಾಡಿ ಹಾಗೂ ಕುಲಾಲ ಸಮಾಜದ ಗಣ್ಯರು ದುಃಖ ಸಂತಾಪ ಸೂಚಿಸಿರುತ್ತಾರೆ.

Comments are closed.