ಕರಾವಳಿ

ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ 16, ಕಾರ್ಕಳ ತಾಲೂಕಿನ 27 ಹಾಗೂ ಕುಂದಾಪುರ ತಾಲೂಕಿನ 43 ಒಟ್ಟು 3 ತಾಲೂಕುಗಳ 86 ಗ್ರಾಮ ಪಂಚಾಯತ್‌ಗಳ, 448 ಕ್ಷೇತ್ರಗಳ, 1243 ಸದಸ್ಯ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ.

ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನವಾಗಿದೆ. ಡಿಸೆಂಬರ್ 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 19 ಕೊನೆಯ ದಿನವಾಗಿದ್ದು, ಮತದಾನವು ಡಿಸೆಂಬರ್ 27 ರಂದು ಬೆಳಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಯಲಿದೆ. ಮತಗಳ ಎಣಿಕೆಯು ಡಿಸೆಂಬರ್ 30 ರಂದು ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಮತಗಟ್ಟೆಗಳ ವಿವರ: ಜಿಲ್ಲೆಯ ಕಾಪು, ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳ ಮತಗಟ್ಟೆಗಳ ವಿವರ ಹೀಗಿದೆ. ಕಾಪು ತಾಲೂಕಿನಲ್ಲಿ 79 ಸಾಮಾನ್ಯ, 52 ಸೂಕ್ಷ್ಮ, 11 ಅತೀ ಸೂಕ್ಷ್ಮ ಸೇರಿದಂತೆ ಒಟ್ಟು 142 ಮತಗಟ್ಟೆಗಳಿವೆ, ಕಾರ್ಕಳದಲ್ಲಿ 149 ಸಾಮಾನ್ಯ, 20 ಸೂಕ್ಷ್ಮ, 24 ನಕ್ಸಲ್ ಸೇರಿದಂತೆ ಒಟ್ಟು 193 ಮತಗಟ್ಟೆಗಳಿವೆ ಮತ್ತು ಕುಂದಾಪುರದಲ್ಲಿ 196 ಸಾಮಾನ್ಯ, 55 ಸೂಕ್ಷ್ಮ, 20 ನಕ್ಸಲ್ ಸೇರಿದಂತೆ ಒಟ್ಟು 271 ಮತಗಟ್ಟೆಗಳಿದ್ದು, ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ 424 ಸಾಮಾನ್ಯ, 127 ಸೂಕ್ಷ್ಮ, 11 ಅತೀ ಸೂಕ್ಷ್ಮ ಮತ್ತು 44 ನಕ್ಸಲ್ ಸೇರಿದಂತೆ ಒಟ್ಟು 606 ಮತಗಟ್ಟೆಗಳಿವೆ.
ಎರಡನೇ ಹಂತದ ಚುನಾವಣೆಗೆ, ಕಾಪುವಿನಲ್ಲಿ 16 ಚುನಾವಣಾಧಿಕಾರಿಗಳು, 19 ಸಹಾಯಕ ಚುನಾವಣಾಧಿಕಾರಿಗಳು ಮತ್ತು 1 ನೋಡೆಲ್ ಅಧಿಕಾರಿಗಳು, ಕಾರ್ಕಳದಲ್ಲಿ 27 ಚುನಾವಣಾಧಿಕಾರಿಗಳು, 29 ಸಹಾಯಕ ಚುನಾವಣಾಧಿಕಾರಿಗಳು ಮತ್ತು ಒಬ್ಬ ನೋಡೆಲ್ ಅಧಿಕಾರಿಗಳು, ಕುಂದಾಪುರದಲ್ಲಿ 43 ಚುನಾವಣಾಧಿಕಾರಿಗಳು, 44 ಸಹಾಯಕ ಚುನಾವಣಾಧಿಕಾರಿಗಳು ಮತ್ತು ಒಬ್ಬ ನೋಡೆಲ್ ಅಧಿಕಾರಿಗಳು, ಸೇರಿದಂತೆ ಒಟ್ಟು 86 ಚುನಾವಣಾಧಿಕಾರಿಗಳನ್ನು, 92 ಸಹಾಯಕ ಚುನಾವಣಾಧಿಕಾರಿಗಳನ್ನು ಹಾಗೂ 3 ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಮತದಾರರ ವಿವರ: ಕಾಪು ತಾಲೂಕಿನಲ್ಲಿ 45639 ಪುರುಷ, 50623 ಮಹಿಳಾ ಮತ್ತು 2 ಇತರೆ ಮತದಾರರು, ಕಾರ್ಕಳದಲ್ಲಿ 62964 ಪುರುಷ, 69012 ಮಹಿಳಾ ಮತದಾರರು, ಕುಂದಾಪುರ ತಾಲೂಕಿನಲ್ಲಿ 91048 ಪುರುಷ, 97164 ಮಹಿಳಾ ಮತದಾರರು ಮತ್ತು ಒಬ್ಬ ಇತರೆ ಮತದಾರರು ಸೇರಿದಂತೆ ಒಟ್ಟು 416453 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Comments are closed.