ಕರಾವಳಿ

ಕೊಡೇರಿಯಲ್ಲಿ ಪೊಲೀಸರ ಮೇಲೆ ಕಲ್ಲು ಎಸೆದ 14 ಮಂದಿಗೆ 14 ದಿನ ನ್ಯಾಯಾಂಗ ಬಂಧನ; 14 ಬೋಟ್ ವಶ..!

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಕೊಡೇರಿಯಲ್ಲಿ ಮೀನುಗಾರಿಕಾ ಹರಾಜು ಪ್ರಾಂಗಣದಲ್ಲಿ ಮೀನು ಹರಾಜು ಪ್ರಕ್ರಿಯೆ ವಿಚಾರದಲ್ಲಿ ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ನಡುವೆ ನಡೆದ ಗಲಾಟೆಯಲ್ಲಿ ಪೊಲೀಸರ ಮೇಲೆ ಕಲ್ಲು, ದೊಣ್ಣೆ, ಬಾಟಲಿ ಹಾಗೂ ಚಪ್ಪಲಿ ತೂರಿದ್ದಲ್ಲದೆ ಅವ್ಯಾಚವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹಾಗೂ ಬೈಂದೂರು ಪಿಎಸ್ಐ ಸಂಗೀತಾ ಹಾಗೂ ಸಿಬ್ಬಂದಿಗಳ ತಂಡ  14 ಮಂದಿ ಕಿಡಿಗೇಡಿಗಳನ್ನು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

(ಸಂಗ್ರಹ ಚಿತ್ರಗಳು)

ಕಿರಿಮಂಜೇಶ್ವರ ಕೊಡೇರಿ ನಿವಾಸಿಗಳಾದ ಸುಬ್ರಮಣ್ಯ ಕುಮಾರ್ (31), ಪ್ರಕಾಶ್(33), ಅಂಬರೀಶ್ (29), ಶ್ರೀಕಾಂತ ಖಾರ್ವಿ (26), ಬೈಂದೂರು ಕಾಲ್ತೋಡು ಶಂಕರ ನಾಯ್ಕ್ (25), ಕೊಡೇರಿ ಮೂಲದ ಸುಬ್ರಮಣ್ಯ ಖಾರ್ವಿ (30), ಪ್ರಕಾಶ ಖಾರ್ವಿ (24), ರೋಹಿತ್ ಖಾರ್ವಿ (25), ತಿಮ್ಮಪ್ಪ ಖಾರ್ವಿ(50), ಹರ್ಷಿತ್ ಖಾರ್ವಿ (25), ರಂಜಿತ್ ಖಾರ್ವಿ (22), ಹರೀಶ್ ಖಾರ್ವಿ(22), ಶ್ರೀನಿವಾಸ ಖಾರ್ವಿ(59), ಸುನೀಲ್ ಖಾರ್ವಿ (22) ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸರು ಹದಿನಾಲ್ಕು ಬೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಪೊಲೀಸರು ಕುಂದಾಪುರದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರೀ ವಾದ ಮಂಡಿಸಿದರು. ನ್ಯಾಯಾಲಯ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಘಟನೆ ಹಿನ್ನೆಲೆ:
ಶನಿವಾರ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಉಪ್ಪುಂದ ಮೀನುಗಾರರು ತಮ್ಮ ದೋಣಿಯಲ್ಲಿದ್ದ ಮೀನು ಖಾಲಿ ಮಾಡಲು ದಕ್ಕೆಗೆ ತೆರಳದಂತೆ ದೋಣಿ ಅಡ್ಡಗಟ್ಟಿದ ಕೊಡೇರಿ ಮೀನುಗಾರರು ಐದು ಗಂಟೆಗಳ ಕಾಲ ದೋಣಿ ತಡೆದುಪ್ರತಿಭತಿಸಿದ್ದರು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರಿ ಪೊಲೀಸರ ಸಮಕ್ಷಮ ಸ್ಥಳಕ್ಕೆ ತೆರಳಿ ಕೊಡೇರಿ ಭಾಗದವರ ಜೊತೆಗೆ ಮಾತುಕತೆಗೆ ನಡೆಸಿದರೂ ಅದು ಫಲಪ್ರದವಾಗಿಲ್ಲ. ಸುಮಾರು 100 ರಿಂದ 200 ಜನರು ಅಕ್ರಮ ಕೂಟ ಸೇರಿಕೊಂಡು ಸರಕಾರಿ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದಾಗ ಪೊಲೀಸರು ದೋಣಿಗಳನ್ನು ತಡೆದಿರುವ ಪ್ರತಿಭಟನಾಕಾರರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು, ದೊಣ್ಣೆ, ಚಪ್ಪಲಿ ಹಾಗೂ ವಾಟರ್‌ ಬಾಟಲ್‌ ಗಳನ್ನು ತೂರಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದರು.

ಈ ಪ್ರಕರಣಕ್ಕೆ ಸಂಬಂದಿಸಿ 14 ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದು ಇನ್ನು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಕಲಂ 143, 147, 148, 353, 504, 506,149 ಅಡಿ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ:

ಕೊಡೇರಿಯಲ್ಲಿ ಮೀನುಗಾರರ ಜಟಾಪಟಿ; ಪೊಲೀಸರು ಬೀಸಿದ್ರು ಲಾಠಿ..! (Video)

ಕೊಡೇರಿ ಗಲಾಟೆಯಲ್ಲಿ ಪೊಲೀಸರ ಮೇಲೆ ಕಲ್ಲು, ಬಾಟಲಿ ತೂರಿದ ಬಗ್ಗೆ ಪ್ರಕರಣ ದಾಖಲು..!

 

Comments are closed.