ಕರಾವಳಿ

ಹಿರಿಯಡ್ಕದಲ್ಲಿ ಹಾಡಹಗಲೇ ಕಿಶನ್‌ ಹೆಗ್ಡೆ ಹತ್ಯೆ ಮಾಡಿದ್ದು ರೌಡಿಶೀಟರ್‌ ಕೋಡಿಕೆರೆ ಮನೋಜ್‌ ತಂಡ..!

Pinterest LinkedIn Tumblr

ಉಡುಪಿ: ಜಿಲ್ಲೆಯ ಹಿರಿಯಡ್ಕದಲ್ಲಿ ಗುರುವಾರ ನಡೆನ ಕಿಶನ್‌ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪರಾರಿಯಾಗಿದ್ದ ಇನೋವಾ ವಾಹನವು ಕಾರ್ಕಳ ಸಮೀಪದ ಇರ್ವತ್ತೂರಿನಲ್ಲಿ ಶುಕ್ರವಾರ ಪತ್ತೆಯಾಗಿದೆ. ಮಂಗಳೂರಿನ ದಿವ್ಯರಾಜ್‌ ಶೆಟ್ಟಿ ಹಾಗೂ ಹರಿಪ್ರಸಾದ್‌ ಶೆಟ್ಟಿ ಅವರೊಂದಿಗೆ ಕಿಶನ್‌ ಹೆಗ್ಡೆ(36) ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆಂದು ತೆರಳಲು ಕಾರಿನಿಂದ ಇಳಿಯುವ ವೇಳೆ ಗುರುವಾರ ಕೊಲೆ ನಡೆದಿತ್ತು.

(ಹತ್ಯೆಯಾದ ಕಿಶನ್)

ಸುತ್ತಿಗೆ, ಮಾರಕಾಯುಧಗಳನ್ನು ಹಿಡಿದುಕೊಂಡು ಕಾರಿನ ಮುಂಭಾಗದಿಂದ ಆಗಮಿಸಿದ 4-5 ಮಂದಿಯ ತಂಡ ಏಕಾಏಕಿಯಾಗಿ ಕಾರಿನ ಗಾಜಿಗೆ ಸುತ್ತಿಗೆಯಿಂದ ಹೊಡೆದು ಜಖಂ ಗೊಳಿಸಿತ್ತು. ಅನಂತರ ಕಿಶನ್‌ ಹೆಗ್ಡೆ ಮೇಲೆ ಮನೋಜ್‌ ತಲವಾರಿನಿಂದ ಕಡಿದು ಗಾಯಗೊಳಿಸಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ ಕಿಶನ್‌ನನ್ನು ಹಿಂಬಾಲಿಸಿದ ತಂಡ ತಲೆಗೆ ಬಲವಾಗಿ ಹೊಡೆದು ಕೊಲೆಗೈದಿದ್ದಾರೆ.

ಹಣಕಾಸು ವೈಷಮ್ಯ..!
ರೌಡಿಶೀಟರ್‌ಗಳಾದ ಕಿಶನ್‌ ಹೆಗ್ಡೆ ಹಾಗೂ ಮನೋಜ್‌ ಕೋಡಿಕೆರೆ ಅವರ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಮನೋಜ್‌ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಕೊಲೆಯ ಬಳಿಕ ಆರೋಪಿಗಳು ಪರಾರಿಯಾದ ರಿಟ್ಜ್ ಕಾರು ಗುರುವಾರವೇ ಕಣಂಜಾರು ದೇವಸ್ಥಾನದ ಬಳಿ ಪತ್ತೆಯಾಗಿತ್ತು. ಇನೋವಾ ಕಾರು ಶುಕ್ರವಾರ ಕಾರ್ಕಳ ಸಮೀಪದ ಇರ್ವತ್ತೂರುವಿನಲ್ಲಿ ಪತ್ತೆಯಾಗಿದೆ.

Comments are closed.