ಕರಾವಳಿ

ರೆಡ್‌ಕ್ರಾಸ್ ಸಂಸ್ಥೆಗೆ ಮೋಸ ಆರೋಪ; ಸಂಸ್ಥೆಯ ಉಡುಪಿ ಚೇರ್ಮನ್ ವಿರುದ್ಧ ಪ್ರಕರಣ ದಾಖಲು!

Pinterest LinkedIn Tumblr

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ಮೋಸ ಮಾಡಿರುವ ಆರೋಪದಲ್ಲಿ ರೆಡ್‌ಕ್ರಾಸ್ ಸೊಸೈಟಿ ಜಿಲ್ಲೆಯ ಚೇರ್ಮನ್ ಬಸ್ರೂರು ರಾಜೀವ ಶೆಟ್ಟಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ರೆಡ್‌ಕ್ರಾಸ್‌ನ ಆಡಳಿತ ಮಂಡಳಿ ಸದಸ್ಯರೂ ಸಹ ಆಗಿರುವ ಬಸ್ರೂರು ರಾಜೀವ ಶೆಟ್ಟಿ, ರೆಡ್‌ಕ್ರಾಸ್ ಸೊಸೈಟಿ ಹೆಸರಿನಲ್ಲಿ ಸಾರ್ವಜನಿಕರಿಂದ ಕಾನೂನು ಬಾಹಿರ ದೇಣಿಗೆ ಪಡೆದುಕೊಂಡಿದ್ದಾರೆ. ರೆಡ್‌ಕ್ರಾಸ್ ಸೊಸೈಟಿಗೆ ಮೋಸ ಮಾಡುವ ಉದ್ದೇಶದಿಂದ ಅದರ ಚಿಹ್ನೆ ಮತ್ತು ಟ್ರೇಡ್‌ಮಾರ್ಕ್ ಉಪಯೋಗಿಸಿ ತಮ್ಮದೇ ಆದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಟ್ರಸ್ಟನ್ನು ಉಡುಪಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2020ರ ಜ.6ರಂದು ನೋಂದಾಯಿಸಿ ಮೂಲ ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ಮೋಸ ಮಾಡಲಾಗಿದೆ ಎಂದು ನಗರ ಠಾಣೆಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೆಂಗಳೂರು ಚೇರ್ಮನ್ ಎಸ್.ನಾಗಣ್ಣ ದೂರು ನೀಡಿದ್ದಾರೆ.

Comments are closed.