ಮುಂಬೈ

ಕೊರೋನಾ ವಿಚಾರದಲ್ಲಿ ಕಣ್ಣಿರಿಟ್ಟ ಮಹಾರಾಷ್ಟ್ರ ಸಿಎಂ ವೈದ್ಯಕೀಯ ಸಹಾಯ ಮುಖ್ಯಸ್ಥ

Pinterest LinkedIn Tumblr

ಮುಂಬೈ: ಮುಂಬೈ ಮತ್ತು ಇತರ ನಗರಗಳಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ, ಜನರು ಸಾಯುತ್ತಿದ್ದಾರೆ. ಮಹಾರಾಷ್ಟ್ರವು ಸಂಪೂರ್ಣ ಗೊಂದಲದಲ್ಲಿದೆ ಎಂಬ ಆತಂಕಕಾರಿ ಸುದ್ದಿಯನ್ನು ಮಹಾರಾಷ್ಟ್ರದ ಓಎಸ್ಡಿ ಸಿಎಂ ವೈದ್ಯಕೀಯ ನೆರವು ಕೋಶದ ಮುಖ್ಯಸ್ಥರಾದ ಓಂ ಪ್ರಕಾಶ್ ಶೆಟ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾವುಕರಾಗಿ ವಿವರಿಸಿದ್ದಾರೆ.

ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಮಹಾರಾಷ್ಟ್ರದ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ಶೆಟ್ ಮಾತನಾಡುತ್ತಿದ್ದು, ಕೊರೋನಾ ವಿಚಾರದಲ್ಲಿ ಮಹಾರಾಷ್ಟ್ರ ದೇಶದ ಅತ್ಯಂತ ಕೆಟ್ಟ ರಾಜ್ಯವಾಗಿದೆ. ನನ್ನ ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ, ಕೆಲವೊಮ್ಮೆ ನಿದ್ರೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಒಂದು ಕಾಲದಲ್ಲಿ ನಿರ್ಮಿಸಲಾದ ದೇವಾಲಯವು ಈಗ ಕುಸಿದಿದೆ. ಸಾಮಾನ್ಯ ಮನುಷ್ಯನು ತನ್ನನ್ನು ತಾನು ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ. ಜನರ ಸಮಸ್ಯೆಗಳು ಮುಖ್ಯಮಂತ್ರಿಗಳ ಕಣ್ಣ ಮುಂದಿದ್ದು ಅವರ ವಿವೇಚನಾ ಶಕ್ತಿ ಮೇಲೆ ಎಲ್ಲವೂ ನಿರ್ಣಾಯಕವಾಗಿದೆ ಎಂದರು.

ನಾವು 17 ಲಕ್ಷ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸಿದ್ದೇವೆ, ಆದರೆ ಈಗ ಜನರು ಸಾಯುತ್ತಿದ್ದಾರೆ. ಮೂಲಗಳ ಪ್ರಕಾರ ಪ್ರತಿದಿನ 600 ಜನರು ಸಾಯುತ್ತಾರೆ. ಜನರಿಗೆ ಉತ್ತರಿಸಲು ಕಷ್ಟವಾಗುತ್ತಿದ್ದು ನನಗೆ ಯಾವುದೇ ಭರವಸೆಗಳಿಲ್ಲ, ಹಾಗಾಗಿ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ, ಅದು ನನ್ನ ಕೊನೆಯ ಭರವಸೆ. ಸಾಮಾನ್ಯ ಜನರನ್ನು ಉಳಿಸಲಾಗದಿದ್ದರೆ ಅದು ದುರಂತ. ಅನೇಕ ಜನರು ಸಾಯುತ್ತಿದ್ದಾರೆ, ಅವರು ಏಕೆ ಸಾಯುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಈ ತಾಂತ್ರಿಕ ದೋಷವನ್ನು ತೆಗೆದುಹಾಕುವಂತೆ ನ್ಯಾಯಾಲಯಕ್ಕೆ ನನ್ನ ಮನವಿಯಾಗಿದೆ ಎಂದು ಅವರು ಮಾಧ್ಯಮಗಳ ಮುಂದೆ ಕಣ್ಣಿರು ಹಾಕುತ್ತಾ ನುಡಿದರು.

 

Comments are closed.