ಕರಾವಳಿ

ಮಂಗಳೂರು ಮಹಿಳಾ ಐ.ಟಿ.ಐ : ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ಆಗಸ್ಟ್ 28: ಸರ್ಕಾರಿ ಐ.ಟಿ.ಐ ಮಹಿಳಾ, ಕದ್ರಿಹಿಲ್ಸ್, ಮಂಗಳೂರು ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಿಪಿಪಿ ತರಬೇತಿ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡು ಎನ್.ಸಿ.ವಿ.ಟಿ ಸಂಯೋಜನೆ ಪಡೆದ ಈ ಕೆಳಕಂಡ ವೃತ್ತಿಗಳ ಮ್ಯಾನೇಜ್‍ಮೆಂಟ್ ಸೀಟ್ (Management Seat) ಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದುಕೊಳ್ಳಬಹುದು.

ಲಭ್ಯವಿರುವ ವೃತ್ತಿಗಳ ಹೆಸರು ಮತ್ತು ವಿವರ ಇಂತಿವೆ:

ಸಿ.ಒ.ಪಿ.ಎ (ಕಂಪ್ಯೂಟರ್ ಅಪರೇಟರ್ ಆಂಡ್ ಪ್ರೋಗ್ರಾಂಮಿಂಗ್ ಅಸಿಸ್ಟೆಂಟ್ – ತರಬೇತಿಯ ಅವಧಿ – 1 ವರ್ಷ, ವಿದ್ಯಾರ್ಹತೆ-ಎಸ್.ಎಸ್.ಎಲ್.ಸಿ, ಮ್ಯಾನೇಜ್‍ಮೆಂಟ್ ಸೀಟ್ – 8.
ಎಲೆಕ್ಟ್ರಾನಿಕ್ ಮೆಕ್ಯಾನಿಕ್ – ತರಬೇತಿಯ ಅವಧಿ – 2 ವರ್ಷ, ವಿದ್ಯಾರ್ಹತೆ-ಎಸ್.ಎಸ್.ಎಲ್.ಸಿ, ಮ್ಯಾನೇಜ್‍ಮೆಂಟ್ ಸೀಟ್ – 8.
ಎಲೆಕ್ಟ್ರಿಷಿಯನ್ – ತರಬೇತಿಯ ಅವಧಿ – 2 ವರ್ಷ, ವಿದ್ಯಾರ್ಹತೆ-ಎಸ್.ಎಸ್.ಎಲ್.ಸಿ, ಮ್ಯಾನೇಜ್‍ಮೆಂಟ್ ಸೀಟ್ – 20.
ಎಂ.ಆರ್.ಎ.ಸಿ – ತರಬೇತಿಯ ಅವಧಿ – 2 ವರ್ಷ, ವಿದ್ಯಾರ್ಹತೆ-ಎಸ್.ಎಸ್.ಎಲ್.ಸಿ, ಮ್ಯಾನೇಜ್‍ಮೆಂಟ್ ಸೀಟ್ – 24.

ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಐ.ಟಿ.ಐ ಮಹಿಳಾ, ಕದ್ರಿಹಿಲ್ಸ್, ಕೊಂಚಾಡಿ ಮಂಗಳೂರು ದೂರವಾಣಿ ಸಂಖ್ಯೆ 0824-2216360, 9845226485 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Comments are closed.