ಬೆಂಗಳೂರು: ಜುಲೈ 5 ರಿಂದ ಭಾನುವಾರ ರಾಜ್ಯ ಸಂಪೂರ್ಣ ಬಂದ್ ಆಗಲಿದೆ. ಶನಿವಾರ ರಾತ್ರಿ 8 ಗಂಟೆಗೆ ಕರ್ಫ್ಯೂ ಜಾರಿಯಾಗಲಿದ್ದು ಭಾನುವಾರ ಲಾಕ್ ಡೌನ್ ಇರಲಿದೆ. ಸೋಮವಾರ ಬೆಳಿಗ್ಗೆ 5 ಗಂಟೆ ತನಕ ಕರ್ಫ್ಯೂ ಇರಲಿದೆ.
ಆಟೋ, ಬಸ್ ಸೇರಿದಂತೆ ಸಾರಿಗೆ ಸಂಪರ್ಕ ಇರಲ್ಲ. ಶಾಪಿಂಗ್ ಮಾಲ್ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಬೀದಿ ಬದಿ ವ್ಯಾಪಾರ ಬಂದ್, ಅಂತರ್ ಜಿಲ್ಲಾ ಪ್ರವಾಸ ಕಂಪ್ಲಿಟ್ ಬಂದ್ ಆಗಲಿದೆ.
ಏನಿರುತ್ತೆ?
ಹಾಲು, ಮೊಸರು, ತರಕಾರಿ ಮತ್ತು ಪೇಪರ್ ಸಿಗಲಿದೆ, ಮೆಡಿಕಲ್ ಶಾಪ್ ಗಳು, ಆಂಬುಲೆನ್ಸ್, ವೈದ್ಯಕೀಯ ಸೇವೆಗಳು ಮಾತ್ರ ಲಭ್ಯವಿರಲಿದೆ.
Comments are closed.