ಮಂಗಳೂರು: ಯುಎಇ ಕನ್ನಡ ಮತ್ತು ತುಳು ಭಾಷಾ ಸಾಂಸ್ಕೃತಿಕ ರಾಯಭಾರಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ, ತುಳು ಭಾಷಾಭಿಮಾನಿ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ರಾಜ್ಯ ಸರಕಾರ ನೇಮಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ನಾನಾ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಬಾಕಿಯಿದ್ದ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಸರ್ವೋತ್ತಮ ಶೆಟ್ಟಿ ಸಹಿತ ಐದು ಮಂದಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ ರವಿ ನೇಮಕಗೊಳಿಸಿದ್ದಾರೆ.
2018ರಲ್ಲಿ ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸುವುದರ ಜತೆಗೆ ಸರ್ವೋತ್ತಮ ಶೆಟ್ಟಿ ಅವರು ತುಳು ಭಾಷೆಯ ಬಗ್ಗೆ ವಿಶೇಷ ಅಭಿಮಾನವನ್ನು ಇರಿಸಿ ಕೆಲಸ ಮಾಡಿದ್ದಾರೆ.
ಮುಲ್ಕಿ, ಬದಿಯಡ್ಕ, ಅಡ್ಯಾರ್ ಮೊದಲಾದ ಕಡೆಗಳಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.
Comments are closed.