ಆರೋಗ್ಯ

ಆರೋಗ್ಯವು ತನ್ನಿಂತಾನೇ ಸುಧಾರಿಸಬೇಕೇ ಈ ಚಟುವಟಿಕೆಯನ್ನು ಅನುಸರಿಸಿಕೊಳ್ಳಿ!

Pinterest LinkedIn Tumblr

ರಾತ್ರಿ ಬೇಗ ಮಲಗಬೇಕು, ಬೆಳಿಗ್ಗೆ ಬೇಗ ಏಳಬೇಕು ಎಂಬ ಹಿಂದಿನಿಂದಲೂ ಪ್ರಚಲಿತವಿರುವ ನಮ್ಮ ಹಿರಿಯರ ಮಾತಿಗೆ ಕಾರಣವಿಲ್ಲ ದಿಲ್ಲ. ಪ್ರತಿ ದಿನವನ್ನೂ ಅದೇ ಉತ್ಸಾಹದಿಂದ ಎದುರಿಸಲು ಅಗತ್ಯವಿರುವ ಶಕ್ತಿಯನ್ನು ಮರಳಿ ಪಡೆಯಲು ಬೆಳಿಗ್ಗೆ ಬೇಗ ಏಳುವುದು ಅಗತ್ಯವಾಗಿದೆ.

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಬೇಗ ಮಲಗಿ ಬೇಗ ಏಳುವ ತತ್ವವನ್ನು ಆಧರಿಸಿ ತಮ್ಮ ದೈನಂದಿನ ಬದುಕನ್ನು ರೂಢಿಸಿಕೊಂಡಿದ್ದರು. ಹೆಚ್ಚಿನೆಲ್ಲ ಚಟುವಟಿಕೆಗಳನ್ನು ಹಗಲಿನಲ್ಲಿ ಮುಗಿಸಲಾಗುತ್ತಿತ್ತು ಮತ್ತು ರಾತ್ರಿ ಸಮಯ ವಿಶ್ರಾಂತಿಗೆ ಮೀಸಲಾಗಿರುತ್ತಿತ್ತು. ಹೀಗಾಗಿ ಶರೀರವು ಹಗಲು ಮತ್ತು ರಾತ್ರಿ ಚಟುವಟಿಕೆ ಮತ್ತು ವಿಶ್ರಾಂತಿಗಳ ಲಯಬದ್ಧತೆಯನ್ನು ಪಡೆದುಕೊಂಡಿತ್ತು. ಚಟುವಟಿಕೆ ಮತ್ತು ವಿಶ್ರಾಂತಿಗಳ ಈ ಚಕ್ರಕ್ಕೆ ಅನುಗುಣವಾಗಿ ನಮ್ಮ ಹಿರಿಯರು ಬೆಳಿಗ್ಗೆ ಬೇಗ ಏಳುತ್ತಿದ್ದರು. ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗಿನ ಜಾವ ಜನರು ಸೂರ್ಯನನ್ನು ಪ್ರಾರ್ಥಿಸುವ ಸಾಂಪ್ರದಾಯಿಕ ವಿಧಿಗಳನ್ನು ಕಾಣಬಹುದು.

ಬೆಳಿಗ್ಗೆ ಬೇಗ ಎದ್ದು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಸಂತೋಷದ ಹಾರ್ಮೋನ್ ಆಗಿರುವ ಸೆರೊಟೋನಿನ್ ನಮ್ಮ ಶರೀರದಲ್ಲಿ ಉತ್ಪಾದನೆಯಾಗುತ್ತದೆ ಮತ್ತು ಇದು ಮಿದುಳಿನ ಮೂರನೇ ಕುಹರದಲ್ಲಿರುವ ಪೀನಲ್ ಗ್ರಂಥಿಯು ಮೆಲಾಟೊನಿನ್ ಹಾರ್ಮೋನ್‌ನ್ನು ಸ್ರವಿಸುವಂತೆ ಮಾಡುತ್ತದೆ. ಈ ಹಾರ್ಮೋನ್ ಮರುದಿನ ಬೆಳಿಗ್ಗೆ ನಾವು ಬೇಗ ಎದ್ದು ತಾಜಾ ಆಗಿರಲು ರಾತ್ರಿ ಸುಖನಿದ್ರೆಗೆ ಅವಕಾಶವನ್ನು ಕಲ್ಪಿಸುತ್ತದೆ. ಈ ಚಕ್ರಕ್ಕೆ ವ್ಯತ್ಯಯವುಂಟಾದಾಗ ನಾವು ಆಧುನಿಕ ಜಗತ್ತಿನ ಎರಡು ಪಿಡುಗುಗಳಾದ ನಿದ್ರೆಯ ಸಮಸ್ಯೆಗಳು ಮತ್ತು ಖಿನ್ನತೆಗೆ ಗುರಿಯಾಗುವಂತಾಗುತ್ತದೆ. ಇದು ನಮಗೆ ನಿದ್ರೆಯ ಮಹತ್ವವನ್ನು ತಿಳಿಸುತ್ತದೆ.

ನಾವು ಎಷ್ಟು ಚೆನ್ನಾಗಿ ನಿದ್ರೆ ಮಾಡುತ್ತೇವೆ ಎನ್ನುವುದು ದಿನವಿಡೀ ನಮ್ಮ ಮನಃಸ್ಥಿತಿಯನ್ನು ನಿರ್ಧರಿಸುತ್ತದೆ. ನಾವು ಚೆನ್ನಾಗಿ ನಿದ್ರೆ ಮಾಡಿದಾಗ ಮಿದುಳಿನೊಂದಿಗೆ ನೇರ ಸಂಪರ್ಕ ಹೊಂದಿರುವ ಮೂಗಿನ ಬಲಹೊಳ್ಳೆಯು ಬೆಳಿಗ್ಗೆ ಸ್ವಯಂಚಾಲಿತವಾಗಿ ಕ್ರಿಯಾಶೀಲ ಗೊಳ್ಳುತ್ತದೆ. ಬೆಳಗ್ಗೆ ನಾವು ಪೂರ್ಣ ಜಾಗ್ರತರಾಗಿದ್ದಾಗ ಸಹಜವಾಗಿಯೇ ನಮ್ಮ ಪ್ರಜ್ಞೆಯು ಅತ್ಯುನ್ನತ ಸ್ಥಿತಿಯಲ್ಲಿರುತ್ತದೆ ಮತ್ತು ನಮ್ಮ ಒಟ್ಟಾರೆ ಆರೋಗ್ಯವು ತನ್ನಿಂತಾನೇ ಸುಧಾರಿಸುತ್ತದೆ.

ನಾವು ರಾತ್ರಿ ತುಂಬ ತಡವಾಗಿ ಮಲಗಿದರೆ ಏನಾಗುತ್ತದೆ? ನೈಸರ್ಗಿಕ ಲಯದ ವಿರುದ್ಧ ಹೋಗುವುದರಿಂದ ನಾವು ಪ್ರವಾಹದ ಎದುರು ಈಜುವ ಸಾಹಸ ಮಾಡುತ್ತೇವೆ ಮತ್ತು ಇದು ಕ್ರಮೇಣ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಅನಿಯಂತ್ರಿತ ಅಭ್ಯಾಸಗಳು ಮತ್ತು ತಡರಾತ್ರಿ ಹಾಸಿಗೆಯಲ್ಲಿ ಬಿದ್ದುಕೊಳ್ಳುವುದು ನಮ್ಮ ನಿದ್ರೆಯ ಸ್ವರೂಪದಲ್ಲಿ ವ್ಯತ್ಯಯಗಳಿಗೆ ಕಾರಣವಾಗುತ್ತವೆ ಹಾಗೂ ನಮ್ಮ ನರಮಂಡಲವು ಒತ್ತಡದಲ್ಲಿರು ವುದರಿಂದ ನಮ್ಮ ರೋಗ ನಿರೋಧಕ ವ್ಯವಸ್ಥೆಯ ಮಟ್ಟವು ಕುಸಿಯುತ್ತದೆ. ರಾತ್ರಿ ನಿದ್ರೆಯಿಂದ ವಂಚಿತರಾದಾಗ ಮರುದಿನ ಉಲ್ಲಾಸವನ್ನು ಕಳೆದುಕೊಳ್ಳುತ್ತೇವೆ ಮತ್ತು ಸಣ್ಣಪುಟ್ಟ ವಿಷಯಗಳೂ ಕಿರಿಕಿರಿಯನ್ನುಂಟು ಮಾಡುತ್ತವೆ.

Comments are closed.