ಕರಾವಳಿ

ಜೂನ್ 17: ದ.ಕ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

Pinterest LinkedIn Tumblr

ಮಂಗಳೂರು ಜೂನ್ 09  : ದ.ಕ ಜಿಲ್ಲಾ ಪಂಚಾಯತ್‍ನ ವಿವಿಧ ತಾಲೂಕುಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ತಾಲೂಕು ಎಂ.ಐ.ಎಸ್. ಸಂಯೋಜಕರು ವಿದ್ಯಾರ್ಹತೆ – ಕಂಪ್ಯೂಟರ್ ಸೈನ್ಸ್‍ನಲ್ಲಿ ಬಿಸಿಎ ಅಥವಾ ಬಿಎಸ್‍ಸಿ, ಮಾಸಿಕ ವೇತನ ರೂ. 20,000, ಖಾಲಿ ಹುದ್ದೆ-2.

ತಾಲೂಕು ಐ.ಇ.ಸಿ ಸಂಯೋಜನಕರು ವಿದ್ಯಾರ್ಹತೆ – ಪೋಸ್ಟ್ ಗ್ರಾಜ್ಯುವೇಶನ್ ಇನ್ ಮಾಸ್ ಕಮ್ಯುನಿಕೇಶನ್ ಅಥವಾ ಡಿಪ್ಲೋಮಾ ಇನ್ ಮಾಸ್ ಕಮ್ಯುನಿಕೇಶನ್, ಮಾಸಿಕ ವೇತನ ರೂ. 17,000, ಖಾಲಿ ಹುದ್ದೆ-2.

ತಾಲೂಕು ತಾಂತ್ರಿಕ ಸಂಯೋಜಕರು ವಿದ್ಯಾರ್ಹತೆ – ಬಿ.ಇ ಅಥವಾ ಬಿ ಟೆಕ್, ಮಾಸಿಕ ವೇತನ ರೂ. 27,000 ಖಾಲಿ ಹುದ್ದೆ-2.

ಡಾಟಾ ಎಂಟ್ರಿ ಆಪರೇಟರ್ ವಿದ್ಯಾರ್ಹತೆ – ದ್ವಿತೀಯ ಪಿಯುಸಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮಾಸಿಕ ವೇತನ – 16,725.45, ಖಾಲಿ ಹುದ್ದೆ -2.

ಅರ್ಜಿ ಸಲ್ಲಿಸುವ ದಿನ ಜೂನ್ 17 ರಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆ. ಸಂದರ್ಶನದ ದಿನ ಜೂನ್ 17 ರಂದು ಬೆಳಿಗ್ಗೆ 11.30 ಗಂಟೆ. ಸಂದರ್ಶನ ನಡೆಯುವ ಸ್ಥಳ ಮಿನಿ ಸಭಾಂಗಣ(ವಿಡಿಯೋ ಕಾನ್ಫರೆನ್ಸ್ ಹಾಲ್) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್.

ಸಂದರ್ಶನದ ದಿನಾಂಕದಂದು ಅಭ್ಯರ್ಥಿಗಳು ಕಡ್ಡಾಯವಾಗಿ ಮೂಲ ದಾಖಲೆಗಳು, ಮೂಲ ದಾಖಲೆಗಳ ದೃಢೀಕೃತ ನಕಲು ಪ್ರತಿ, ಆಧಾರ್ ಕಾರ್ಡ್, 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಹಾಗೂ 2 ರಿಂದ 3 ವರ್ಷ ಅನುಭವದ ಬಗ್ಗೆ ದೃಢೀಕರಣ ತರಬೇಕು.

ನಿಗಧಿತ ಸಮಯದ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ದ.ಕ.ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆ ತಿಳಿಸಿದೆ.

Comments are closed.