‘ಓಂ’ ಶಬ್ದದಿಂದ ದೇಹದಲ್ಲಿನ ಆಯಾಸ(ನಿಶ್ಯಕ್ತಿ) ದೂರವಾಗುತ್ತದೆಂದು ಹದಿನಾಲ್ಕು ವರ್ಷದ ಬಾಲಕಿ ಅನ್ವೇಷ ರಾಯ್ ಪ್ರಯೋಗಾತ್ಮಕವಾಗಿ ನಿರೂಪಿಸಿದ್ದಾಳೆ..ಪಶ್ಚಿಮ ಬೆಂಗಾಲ್ ಸರ್ಕಾರ ನಿರ್ವಹಿಸಿದ ಸೈನ್ ಕಾಂಗ್ರೆಸ್ ನಲ್ಲಿ ತನ್ನ ಪ್ರದರ್ಶನದೊಂದಿಗೆ ಇ ಬಾಲಕಿ ಶಾಸ್ತ್ರಜ್ಞರನ್ನು ಆಕರ್ಷಿಸಿಕೊಂಡಳು. ಕೊಲ್ಕತ್ತಾದ ಅಡಮ್ಸ್ ವರಲ್ಡ್ ಸ್ಕೂಲಿನಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಅನ್ವೇಷ್ ರಾಯ್ ಓಂಕಾರದ ಮೇಲೆ ಪರಿಶೋಧನೆ ಮಾಡಿದ್ದಾಳೆ. ಓಂ ಶಬ್ದವನ್ನು ಕೇಳುವುದರಿಂದ ರಕ್ತದಲ್ಲಿ ಆಕ್ಸಿಜನ್ ಮಟ್ಟ ಹೆಚ್ಚಾಗಿ, ಕಾರ್ಬನ್ ಡೈ ಆಕ್ಸೈಡ್, ಲ್ಯಾಕ್ಟಿಕ್ ಆಸಿಡ್ ನಾಲೆಗಳು ಕಡಿಮೆಯಾಗುತ್ತದೆಂದು, ಅದರ ಮೂಲಕ ಆಯಾಸ ಇರುವುದಿಲ್ಲವೆಂದು ಅನ್ವೇಷ ತನ್ನ ಪ್ರಯೋಗದ ಮೂಲಕ ಕೊಲ್ಕತ್ತಾ, ಜಾದವಪೂರ್ ಯೂನಿವರ್ಸಿಟಿಗಳಿಗೆ ಸೇರಿದ ಫಿಜಿ಼ಕ್ಸ್, ಫಿಜಿ಼ಯಾಲಜಿ ಪ್ರೊಫೆಸರ್ ಗಳ ಮುಂದೆ ನಿರೂಪಿಸಿದಳು.
ಅನ್ವೇಷ ಪ್ರಾಜೆಕ್ಟ್ ವಿನೂತವಾಗಿ ಇದೆಯೆಂದು, ಅಷ್ಟೇ ಅಲ್ಲದೆ ಅಮೋಘ ಯೋಗ್ಯ ಕೂಡ ಇದೆಯೆಂದು ಕೊಲ್ಕತ್ತಾ ಯೂನಿವರ್ಸಿಟಿಗೆ ಸೇರಿದ ಫಿಜಿ಼ಯಾಲಜಿ ವಿಭಾಗದ ಹೆಡ್ ಪ್ರೊಫೆಸರ್ ದೇವಶಿಷ್ ಬಂದೋಪಾಧ್ಯಾಯ ಹೇಳಿದರು.
ಅನ್ವೇಷ ಎಂಬ ಹೆಸರಿನಲ್ಲಿಯೇ ಅನ್ವೇಷಣೆ ಇದೆಯೆಂದು, ಬೆಂಗಾಲಿಯಲ್ಲೂ ಸಹ ಅನ್ವೇಷ್ ಎಂದರೆ ಹುಡುಕು ಎಂದು ಆ ಬಾಲಕಿ ತಿಳಿಸಿದಳು.
ಓಂಕಾರದಿಂದ ಹೊರ ಹೊಮ್ಮುವ ಪ್ರತ್ಯೇಕ ಪೌನಃಪುಣ್ಯ ಸೇರಿ ಶಬ್ದಗಳು ದೇಹದಲ್ಲಿನ ನ್ಯೂರೋಟ್ರಾನ್ಸ್ ಮೀಟರ್ಸನ ಜೊತೆಗೆ ಹಾರ್ಮೋನುಗಳ ಸೆರೋಟಿನಿನ್, ಡೊಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯೆಗೆ ರಕ್ತದಲ್ಲಿ ಆಕ್ಸಿಜನ್ ಮಟ್ಟ ಹೆಚ್ಚುವುದೇ ಕಾರಣವೆಂದು ಅನ್ವೇಷ ರಾಯ್ ಆ ಸಮಯದಲ್ಲಿ ತಿಳಿಸಿದರು.
ಹಾಗೆಯೇ ಕಡಿಮೆ ಪರಿಮಾಣದಲ್ಲಿ ಲಾಕ್ಟಿಕ್ ಆಸಿಡ್ ಬಿಡುಗಡೆಯಾಗುತ್ತದೆ ಇದರಿಂದಾಗಿ ಆಯಾಸ ಎನ್ನುವುದು ಇರುವುದಿಲ್ಲವೆಂದು ಅನ್ವೇಷ ತಿಳಿಸಿದಳು.ಕಳೆದ ಹತ್ತು ವರ್ಷಗಳಿಂದ ಸಂಗೀತ ಸಾಧನೆಯ ಮೂಲಕ ದೇಹಕ್ಕೆ ವ್ಯಾಯಾಮದಂತಾಗಿ , ಮಾನಸಿಕ ಪ್ರಶಾಂತದಿಂದಾಗುತ್ತದೆ ಎಂದು ಪರಿಶೋಧಕರು ನಿರೂಪಿಸಿದರೆಂದು ಪಶ್ಚಿಮ ಬೆಂಗಾಲ್ ಸ್ಟೇಟ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಭಾಗದ ಸೆಕ್ರೆಟರಿ ರಿನ ವೆಂಕಟ್ರಾಮನ್ ತಿಳಿಸಿದರು.ಅದಲ್ಲದೇ ಓಂಕಾರ ದೇಹದ ಮೇಲೆ ನಿರ್ದಿಷ್ಟ ಪ್ರಭಾವ ಬೀರುತ್ತದೆ ಎಂದು ಅನ್ವೇಷ ನಿರೂಪಿಸಿದಳು ಎಂದು ಸಹ ತಿಳಿಸಿದರು.
ಇಲ್ಲಿಯವರೆಗೂ ಯಾರು ಓಂ ಶಬ್ದದ ಮೇಲೆ ಪ್ರತ್ಯೇಕ ಪರಿಶೋಧನೆಗಳು ಮಾಡಿಲ್ಲವೆಂದು ಸ್ಟೇಟ್ ಸೈನ್ಸ್ ಅಂಡ್ ಟೆಕ್ನಾಲಜಿಗೆ ಸೇರಿದ ಸೀನಿಯರ್ ಶಾಸ್ತ್ರಜ್ಞ ದೀಪಾಂಕರ್ ದಾಸ್ ತಿಳಿಸಿದರು.
ವರ್ಕ್ ಶಾಪ್ ಗೆಂದು 165 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆವೆಂದು ತಿಳಿಸಿದರು.
ವರ್ಕ್ ಶಾಪ್ಗೆ ಭಾಗವಾಗಿ ಅನ್ವೇಷ ಉತ್ತರಾಖಂಡ್ ನಲ್ಲಿ ಪರ್ಯಟಣೆಯಲ್ಲಿ ಬಗೇಶ್ವರ್ ನಿಂದ 68ಕಿ.ಮೀ ದೂರವಿರುವ ಕೇದರಿನಾಥ್ ಗೆ ಕಾಲುನಡಿಗೆಯಲ್ಲೇ ದಿನಾಲೂ ನೀರನ್ನು ತೆಗೆದುಕೊಔಡು ಹೋಗುತ್ತಿದ್ದ ಕೆಲವು ಪೂಜಾರಿಗಳೊಂದಿಗೆ ಎಂತಹುದೇ ಆಯಾಸ ಕಾಣದಿರುವುದರಿಂದ ಆಶ್ಚರ್ಯ ಪಟ್ಟಳು. ಹಾಗೆಯೇ ಓಂಕಾರದ ಮೇಲೆ ತನ್ನ ಪ್ರಯೋಗವನ್ನು ನಿರ್ವಹಿಸಬೇಕು ಎಂದು ಭಾವಿಸಿದಳು. ಇದರ ಮೇಲೆ ಪರಿಶೋಧನೆಗೆ ಅಲ್ಲಿಯೇ ಶ್ರೀಕಾರವಾಡಿದಳು. ಓಂ ಶಬ್ದದ ಮೂಲಕ ದೇಹದಲ್ಲಿ 430 ಹೆರ್ಡ್ಸ್ ಪೌನಃಪುಣ್ಯಾವನ್ನು ಹೊರಹಾಕುತ್ತದೆಂದು ಗುರುತಿಸಿ ವಿವಿಧ ಲ್ಯಾಬೊರೇಟರಿಗಳಲ್ಲಿ ಐದು ಪ್ರಯೋಗಗಳನ್ನು ನಿರ್ವಹಿಸಿದಳು. 17 ಮಂದಿ ಯುವತಿ, ಯುವಕರಿಗೆ ಓಂಕಾರವನ್ನು 30 ನಿಮಿಷಗಳವರೆಗೂ ಕೇಳಿಸಿ ಅವರ ದೇಹದಲ್ಲಿನ ಆಕ್ಸಿಜನ್, ಕಾರ್ಬನ್ ಡೈಆಕ್ಸೈಡ್ ಮಟ್ಟವನ್ನು ಲೆಕ್ಕಿಸಿದಳು. ಓಂ ಶಬ್ದದಿಂದ ಅವರ ದೇಹದಲ್ಲಿ ಆಕ್ಸಿಜನ್ ಪರಿಮಾಣ ಹೆಚ್ಚಾಗಿ ,ಕಾರ್ಬನ್ ಡೈಆಕ್ಸೈಡ್ ಮಟ್ಟ ಕಡಿಮೆಯಾಯಿತೆಂದು ಅನ್ವೇಷ ತಿಳಿಸಿದಳು.
Comments are closed.