ಕರಾವಳಿ

ಕುಂದಾಪುರದ ಅಸೋಡು ಎಂಬಲ್ಲಿ ಬಾವಿಗೆ ಬಿದ್ದ ಜಿಂಕೆ ರಕ್ಷಣೆ

Pinterest LinkedIn Tumblr

ಕುಂದಾಪುರ: ತೋಟದಲ್ಲಿದ್ದ ಬಾವಿಗೆ ಬಿದ್ದ ಜಿಂಕೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಮೇ.6 ಬುಧವಾರ ಬೆಳಿಗ್ಗೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಅಸೋಡು ನಾಯ್ಕರಗುಡ್ಡೆ ಎಂಬಲ್ಲಿ ನಡೆದಿದೆ.

(ಚೇತರಿಸಿಕೊಂಡು ಕಾಡಿನತ್ತ ಓಡಿದ ಜಿಂಕೆ)

ಇಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ ತೋಟದಲ್ಲಿದ್ದ ಬಾವಿಗೆ ಜಿಂಕೆಯೊಂದು ಬಿದ್ದಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಕುಂದಾಪುರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಇಲಾಖೆಯವರು 40 ಅಡಿಗೂ ಅಧಿಕ ಆಳವಿರುವ ಬಾವಿಯಲ್ಲಿದ್ದ ಜಿಂಕೆಯನ್ನು ನಾಜೂಕಾಗಿ ಮೇಲಕ್ಕೆತ್ತಿದ್ದಾರೆ.

ಅಂದಾಜು 5-6 ವರ್ಷ ಪ್ರಾಯದ ಗಂಡು ಜಿಂಕೆ ಇದಾಗಿದ್ದು ಸ್ಥಳದಲ್ಲೇ ಜಿಂಕೆಗೆ ಅಗತ್ಯ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಮೇಲಕ್ಕೆತ್ತಿ ಚಿಕಿತ್ಸೆ ನೀಡುತ್ತಿದ್ದಂತೆಯೇ ಚೇತರಿಸಿಕೊಂಡ ಜಿಂಕೆಯು ಅಲ್ಲಿಂದ ಕಾಡಿಗೆ ಓಡಿದೆ. ಕುಂದಾಪುರ ಆರ್.ಎಫ್.ಒ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕಾರದ ಮಾಲತಿ, ವೀಕ್ಷಕ ಸೋಮಶೇಖರ್ ಹಾಗೂ ಸ್ಥಳಿಯರು ಜಿಂಕೆ ರಕ್ಷಣೆ ಕಾರ್ಯಾಚರಣೆಯಲ್ಲಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.