ಕರಾವಳಿ

ಮಂಗಳೂರಿನಲ್ಲಿ ಧಿಡೀರ್ ಪ್ರತ್ಯಕ್ಷವಾಗಿ ಆತಂಕ ಸೃಷ್ಠಿಸಿದ ಕಾಡುಕೋಣ ಸಾವು : ಅರಿವಳಿಕೆ ಮದ್ದು ಓವರ್ ಡೋಸ್ ಕಾರಣ ಶಂಕೆ?

Pinterest LinkedIn Tumblr

ಮಂಗಳೂರು, ಮೇ.06 : ಮಂಗಳೂರಿನ ಜನನಿಬಿಡ ಸ್ಥಳಗಳಲ್ಲಿ ಕಾಣಿಸಿಕೊಂಡು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಕಾಡುಕೋಣವನ್ನು ಸ್ಥಳೀಯರ ಹಾಗೂ ಪೊಲೀಸರ ಸಹಕಾರದೊಂದಿಗೆ ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿದಿದ್ದು ಚಾರ್ಮಾಡಿಯ ಪಶ್ಚಿಮ ಘಟ್ಟದ ಕಾಡಿಗೆ ಬಿಡುವ ಸಂದರ್ಭ ಕಾಡುಕೋಣ ಮೃತಪಟ್ಟಿದೆ ಎನ್ನಲಾಗಿದೆ.

ಮಂಗಳವಾರ ಮುಂಜಾನೆ ನಗರದ ಹೃದಯಭಾಗದ ಮಣ್ಣ ಗುಡ್ಡೆಯಲ್ಲಿ ಪ್ರತ್ಯಕ್ಷವಾಗಿ ಬಳಿಕ ನಗರದ ಹಲವೆಡೆಗಳಲ್ಲಿ ಸಂಚಾರಿಸಿ ಲೇಡಿಹಿಲ್ ಸಮೀಪದ ಹ್ಯಾಟ್ ಹಿಲ್ ನಲ್ಲಿ ರಾಜರೋಷವಾಗಿ ಸುತ್ತಾಡುತ್ತಿರುವುದನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು.

ಏಕಾಏಕಿ ನಗರದೊಳಗೆ ಕಾಡುಕೋಣ ಕಾಣಿಸಿಕೊಂಡ ಪರಿಣಾಮ ಜನದರು ಭಯಭೀತರಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗಮಿಸಿದ ಅರಣ್ಯ ಇಲಾಖೆಯ ತಂಡ ಕಾಯಾಚರಣೆ ಆರಂಭಿಸಿತ್ತು.

ನಗರದೊಳಗೆ ಕಾಡುಕೋಣ ಸೆರೆ ಹಿಡಿಯುವುದು ಸವಾಲಿನ ಕೆಲಸವೊಂದು ಅರಿತಿದ್ದ ಅರಣ್ಯ ಇಲಾಖೆ ಅರವಳಿಕೆ ತಜ್ಞರ ತಂಡದ ಮಾಹಿತಿ ನೀಡಿದ್ದರು. ಅರವಳಿಕೆ ಚುಚ್ಚುಮದ್ದಿನಿಂದ ಪ್ರಜ್ಞಾ ಹೀನವಾದ ಕಾಡುಕೋಣವನ್ನು ಸೆರೆಹಿಡಿದು ಚಾರ್ಮಾಡಿಯ ಪಶ್ಚಿಮ ಘಟ್ಟದ ಕಾಡಿಗೆ ಬಿಡಲಾಗಿತ್ತು. ಆದರೆ, ಕಾಡು ಕೋಣವನ್ನು ರಕ್ಷಿಸುವ ಭರದಲ್ಲಿ ಅರವಳಿಕೆ ಚಚ್ಚುಮದ್ದು ನೀಡಿದ್ದ ಡೋಸ್‌ನ ಪ್ರಮಾಣವು ಜಾಸ್ತಿಯಾಗಿ ಕಾಡುಕೋಣ ಪ್ರಾಣ ಕಳೆದುಕೊಂಡಿದೆ ಎಂದು ತಿಳಿದುಬಂದಿದೆ.

ಮುಖ್ಯಂಶಗಳು :
ಕಾಡು ಬಿಟ್ಟು ನಗರ ಸೇರಿದ ಕಾಡುಕೋಣ ದಾರುಣ ಸಾವು

ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ಸಾವು

ಮಂಗಳೂರು ನಗರದೊಳಗೆ ಮಂಗಳವಾರ ಮುಂಜಾನೆ ಆಗಮಿಸಿದ್ದ ಕಾಡುಕೋಣ

2 ಗಂಟೆ ಕಾರ್ಯಾಚರಣೆ ಮಾಡಿ ಕಾಡು ಕೋಣ ಸೆರೆಹಿಡಿದಿದ್ದ ಅರಣ್ಯ ಇಲಾಖೆ

ಈ ವೇಳೆ ಎರಡು ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು

ಅರಿವಳಿಕೆ ಮದ್ದು ಓವರ್ ಡೋಸ್ ಆಗಿ ಕಾಡುಕೋಣ ದಾರುಣ ಸಾವು

ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಗೆ ಅನ್ಯಾಯವಾಗಿ ಪ್ರಾಣತೆತ್ತ ಕೋಣ.

Comments are closed.