ಗಲ್ಫ್

ಶಾರ್ಜಾದ 47 ಮಹಡಿಗಳ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ಅನಾಹುತ; ಈ ಭಯಾನಕ ವಿಡಿಯೋ ನೋಡಿ…

Pinterest LinkedIn Tumblr

ಶಾರ್ಜಾ: ಯುಎಇಯ ಶಾರ್ಜಾದ 47 ಮಹಡಿಗಳ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಗಗನಚುಂಬಿ ಕಟ್ಟಡ ಹೊತ್ತಿ ಉರಿದಿದ್ದು, ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

ಅಲ್ ನಹ್ದಾದಲ್ಲಿರುವ ಅಬ್ಕೋ ಟವರ್ ನಲ್ಲಿ ಈ ಘಟನೆ ಸಂಭವಿಸಿದ್ದು, ಶಾರ್ಜಾ ನಾಗರಿಕ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಜನರನ್ನು ಸ್ಥಳಾಂತರಿಸಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನಗಳು, ಆ್ಯಂಬುಲೆನ್ಸ್ ಗಳು ಧಾವಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

Comments are closed.