ಕರಾವಳಿ

ಕಟೀಲಿನಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಮತ್ತು ನೇತ್ರದಾನ ನೋಂದಣಿ ಶಿಬಿರ

Pinterest LinkedIn Tumblr

ಮಂಗಳೂರು/ ಕಟೀಲು, ಮಾರ್ಚ್.17: ಕಟೀಲಿನ ಎಸ್.ಡಿ.ಪಿ.ಟಿ, ಪಿ.ಯು ಕಾಲೇಜು ಆವರಣದಲ್ಲಿ ರವಿವಾರ ಬೃಹತ್ ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಮತ್ತು ನೇತ್ರದಾನ ನೋಂದಣಿ ಶಿಬಿರ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲು ಸಾರಥ್ಯದಲ್ಲಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು, ಕಟೀಲು ಸ್ಪೋರ್ಟ್ಸ್ ಆ್ಯಂಡ್ ಗೇಮ್ಸ್ ಕ್ಲಬ್‌ (ರಿ) ಕಟೀಲು, ನಂದಿನಿ ಯುವಕ ಮಂಡಲ (ರಿ) ಕಟೀಲು, ವೀರ ಮಾರುತಿ ವ್ಯಾಯಮಶಾಲೆ (ರಿ) ಮೆನ್ನಬೆಟ್ಟು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಎಸ್.ಡಿ.ಪಿ.ಟಿ ಕಾಲೇಜು ಕಟೀಲು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು – ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಎಸ್ಸಿಲಾರ್ ವಿಷನ್ ಪೌಂಡೇಷನ್, ಡಾ | ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ) ಸೆಂಚುರಿ ಗ್ರೂಪ್ಸ್ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಮತ್ತು ನೇತ್ರದಾನ ನೋಂದಣಿ ಶಿಬಿರ ಬಾನುವಾರ ಕಟೀಲಿನ ಎಸ್.ಡಿ.ಪಿ.ಟಿ, ಪಿ.ಯು ಕಾಲೇಜು ಆವರಣದಲ್ಲಿ ನಡೆಯಿತು.

Comments are closed.