ಮಂಗಳೂರು : ವಿಶ್ವ ಆರೋಗ್ಯ ಸಂಸ್ಥೆಯು ದೆಹಲಿಯ ಸಿ.ಎಂ.ಎಸ್ ಸಂಸ್ಥೆಯ ಮೂಲಕ ಆಯೋಜಿಸಿದ ರಸ್ತೆ ಸುರಕ್ಷತಾ ಮೀಡಿಯಾ ಫೆಲೋಶಿಪ್-2019 ದ್ವಿತೀಯ ಪ್ರಶಸ್ತಿಯನ್ನು ಪತ್ರಕರ್ತ (ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪಸಂಪಾದಕ) ಬಿ. ರವೀಂದ್ರ ಶೆಟ್ಟಿ ಪಡೆದುಕೊಂಡಿದ್ದಾರೆ.
ರೋಡ್ ಸೇಫ್ಟಿ ಮೀಡಿಯಾ ಫೆಲೋಶಿಪ್-2019 ಯೋಜನೆಯಡಿ ಮಾಧ್ಯಮದ ಮೂಲಕ ರಸ್ತೆ ಸುರತಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಅನನ್ಯ ಕೊಡುಗೆ ಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ. ದೇಶದಾದ್ಯಂತ 12 ಮಂದಿ ಪತ್ರಕರ್ತರು ಇದರಲ್ಲಿ ಭಾಗವಹಿಸಿದ್ದು, ಕರ್ನಾಟಕದ ಕನ್ನಡ ಮಾಧ್ಯಮದ ಏಕೈಕೆ ಪ್ರತಿನಿಧಿ ಇವರಾಗಿದ್ದಾರೆ.
ಪ್ರಶಸ್ತಿಯು 15 ಸಾವಿರ ನಗದು ಹಾಗೂ ಫಲಕವನ್ನುಹೊಂದಿದೆ. ದೆಹಲಿಯಲ್ಲಿ ಆಯೋಜಿಸಲಾಗುವ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ಪ್ರಶಸ್ತಿ ಪಡೆದುಕೊಳ್ಳಲಿದ್ದಾರೆ.
ಪ್ರಥಮ ಬಹುಮಾನವನ್ನು ಇಂಡಿಯಾ ಸ್ಪೆಂಡ್ ಸಂಸ್ಥೆಯ ಪ್ರಾಚಿ ಸಾಲ್ವೆ ಹಾಗೂ ದೈನಿಕ ಜಾಗರಣ್ ಪತ್ರಿಕೆಯ ಪ್ರದೀಪ್ ದ್ವಿವೇದಿ ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು ಬಿ. ರವೀಂದ್ರ ಶೆಟ್ಟಿ ಹಾಗೂ ಟೌಮ್ಸ್ ನೌ ಹಿಂದಿಯ ಪೂರ್ಣಿಮಾ ಸಿಂಗ್ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ದೆಹಲಿ ಪಿಟಿಐಯ ಕಿಶೋರ್ ದ್ವಿವೇದಿ ಹಾಗೂ ದ ಟೈಮ್ಸ್ ಆಫ್ ಇಂಡಿಯಾದ ಸಂಗಮೇಶ್ ಮೆಣಸಿನಕಾಯಿ ಪಡೆದುಕೊಂಡಿದ್ದಾರೆ.

Comments are closed.