ಕರಾವಳಿ

ಎಟಿಎಂ ಪಿನ್ ಬಳಸಿ 82 ಸಾವಿರ ಹಣ ಲಪಟಾಯಿಸಿದ ಖದೀಮರು!

Pinterest LinkedIn Tumblr

ಉಡುಪಿ: ಎಟಿಎಂ ಕಾರ್ಡ್ ಪಿನ್ ನಂಬರ್ ಬಳಸಿ ತನ್ನ ಗಮನಕ್ಕೆ ಬಾರದೇ ಖಾತೆಯಿಂದ ಯಾರೋ ಹಣ ಲಪಟಾಯಿಸಿದ್ದಾರೆಂದು ಮೋಸ ಹೋದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಮಣಿಪಾಲದ ನಿವಾಸಿ ಇಮಾನ್ ಜಮೀಲ್ (23) ಎನ್ನುವರು ಮಣಿಪಾಲದ ಎಸ್.ಬಿ.ಐ. ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಅಲ್ಲಿಯೇ ಬ್ಯಾಂಕ್ ನ ಎ.ಟಿ.ಎಂ. ಕಾರ್ಡ್‌ ಹೊಂದಿದ್ದಾರೆ. ಜ. 30 ರಿಂದ ಫೆ.1ರ ಮಧ್ಯಾವದಿಯಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಇಮಾನ್ ಅವರ ಎ.ಟಿ.ಎಂ. ಕಾರ್ಡ್‌ ನಂಬ್ರವನ್ನು ದುರ್ಬಳಕೆ ಮಾಡಿ ಅವರ ಗಮನಕ್ಕೆ ಬಾರದೇ ಮತ್ತು ಅನುಮತಿ ಇಲ್ಲದೇ ಖಾತೆಯಿಂದ ಒಟ್ಟು ರೂಪಾಯಿ 82,100 ರೂ. ಹಣವನ್ನು ಯು.ಪಿ.ಐ. ಟ್ರಾನ್ಸೆಕ್ಷನ್ ಮೂಲಕ ಹಾಗೂ ಪೇಟಿಎಂ ಮೂಲಕ ವರ್ಗಾವಣೆ ಮಾಡಿಕೊಂಡು, ನಷ್ಟ ಉಂಟು ಮಾಡಿದ್ದಾರೆ.

ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.