ರಾಷ್ಟ್ರೀಯ

ಮೊಬೈಲ್ ಬಳಕೆದಾರರೇ ನಾಳೆಯಿಂದ ಬದಲಾಗಲಿದೆ ನಿಮ್ಮ ಸಿಮ್ ನಿಯಮ…!

Pinterest LinkedIn Tumblr

ನಿಮ್ಮ ಮೊಬೈಲ್​ ಫೋನ್​ಗೆ ಸರಿಯಾಗಿ ನೆಟ್​ವರ್ಕ್​ ಸಿಗ್ತಿಲ್ವಾ? ಸಿಗ್ನಲ್ ಸಮಸ್ಯೆಯಿಂದ ರೋಸಿ ಹೋಗಿದ್ದೀರಾ? ಹಾಗಿದ್ರೆ ಇನ್ಮುಂದೆ ಹೆಚ್ಚು ಚಿಂತಿಸಬೇಕಾಗಿಲ್ಲ.

ಟೆಲಿಕಾಂ ನಿಯಂತ್ರಣ ಅಥಾರಿಟಿ (TRAI) ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿಗಾಗಿ ಹೊಸ ನಿಯಮವನ್ನು ಡಿಸೆಂಬರ್ 16ರಿಂದ ಜಾರಿಗೊಳಿಸುತ್ತಿದೆ.

ಈ ಹೊಸ ಪ್ರಕ್ರಿಯೆಯಲ್ಲಿ ಯುನಿಕ್ ಪೋರ್ಟಿಂಗ್ ಕೋಡ್ (ಯುಪಿಸಿ) ರಚಿಸುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಅದರಂತೆ ಇನ್ನು ಮುಂದೆ ಯಾರಾದರೂ ಸಿಮ್ ಪೋರ್ಟಿಂಗ್ ವಿನಂತಿ ಸಲ್ಲಿಸಿದರೆ ಅದನ್ನು ಕೇವಲ 3 ದಿನಗಳಲ್ಲಿ (ವರ್ಕಿಂಗ್ ಡೇ) ಪೂರ್ಣಗೊಳಿಸಬೇಕು ಎಂದು ಕಂಪೆನಿಗಳಿಗೆ ತಿಳಿಸಲಾಗಿದೆ.

ಅದೇ ರೀತಿ ಒಂದು ಸರ್ಕಲ್​ನಿಂದ ಮತ್ತೊಂದು ಸರ್ಕಲ್​ಗೆ ಪೋರ್ಟ್​ ಮಾಡಿಕೊಳ್ಳಲು 5 ಕೆಲಸದ ದಿನಗಳ ಕಾಲಾವಧಿ ನಿಗದಿಪಡಿಸಲಾಗಿದೆ.

ಅಂದರೆ ನೀವು ನಂಬರ್ ಪೊರ್ಟ್​ ಮಾಡಿಕೊಳ್ಳುವ ಕೋರಿಕೆ ಸಲ್ಲಿಸಿದರೆ ಕೇವಲ 48 ಗಂಟೆಗಳ ಒಳಗೆ ನಿಮ್ಮ ನೆಟ್​ವರ್ಕ್​ ಅನ್ನು ಬದಲಾಯಿಸಿಕೊಳ್ಳಬಹುದು ಎಂದು ಟ್ರಾಯ್ ತಿಳಿಸಿದೆ.

ಇದಲ್ಲದೆ ಇಂಟರ್ ಸರ್ಕಲ್ ಎಂಎನ್‌ಪಿಗೆ, ಅಂದರೆ ನಿಮ್ಮ ಸಿಮ್ ಅನ್ನು ಎರಡು ವಲಯಗಳ ನಡುವೆ ಪೋರ್ಟ್ ಮಾಡಲು ಕೇವಲ 5 ದಿನಗಳು ಮಾತ್ರ ತೆಗೆದುಕೊಳ್ಳಲಿದೆ.

ಈ ಹೊಸ ನಿಯಮವು ಇದೇ ಡಿಸೆಂಬರ್ 16 ರಿಂದ ಜಾರಿಗೆ ಬರಲಿದ್ದು, ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲಗಳಾಗಲಿವೆ ಎಂದು ಟೆಲಿಕಾಂ ನಿಯಂತ್ರಣ ಅಥಾರಿಟಿ (TRAI) ಅಭಿಪ್ರಾಯಪಟ್ಟಿದೆ.

ಎಂಎನ್‌ಪಿ ಎಂದರೇನು? – ಮೊಬೈಲ್ ನಂಬರ್ ಪೋರ್ಟಬಿಲಿಟಿ. ಎಂಎನ್​ಪಿ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ಆಪರೇಟರ್‌ನಿಂದ ಮತ್ತೊಂದು ಆಪರೇಟರ್‌ಗೆ ಪೋರ್ಟ್ ಮಾಡಿಕೊಳ್ಳಬಹುದು. ಉದಾ: ಏರ್​ಟೆಲ್​ ಟು ಜಿಯೋ, ಜಿಯೋ ಟು ವೊಡಾಫೋನ್ . ಕಂಪೆನಿ ಬದಲಿಸಿದರೂ ನಿಮ್ಮ ನಂಬರ್ ಬದಲಾವಣೆ ಆಗುವುದಿಲ್ಲ.

Comments are closed.