ಕರಾವಳಿ

ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಗುರುಸ್ಪಂದನ (ಮನೆ ಮನೆ ಭೇಟಿ ) ಧರ್ಮ ಜಾಗೃತಿ ಅಭಿಯಾನ ಸಮಾರೋಪ

Pinterest LinkedIn Tumblr

ಮಂಗಳೂರು  : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ಇದರ ವತಿಯಿಂದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧಿಪತಿ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರಿಂದ ಗುರುಸ್ಪಂದನ (ಮನೆ ಮನೆ ಭೇಟಿ ) ಧರ್ಮ ಜಾಗೃತಿ ಅಭಿಯಾನ ಕಾರ್ಯಕ್ರಮ ಮಂಗಳೂರಿನ ಕೊಡಿಯಾಲಗುತ್ತು ಅಳಕೆ ಪ್ರದೇಶದಲ್ಲಿರುವ ವಿಶ್ವಬ್ರಾಹ್ಮಣ ಸಮಾಜದ ಮನೆಗಳಲ್ಲಿ ಆರಂಭಗೊಂಡು ಸಮಾರೋಪ ಸಮಾರಂಭ ಶ್ರೀ ರಾಜಗೋಪಾಲ್ ಅಳಕೆ ಇವರ ಮನೆಯಲ್ಲಿ ನಡೆಯಿತು.

ಶ್ರೀ ರಾಧಾಕೃಷ್ಣ ಮಂದಿರದ ಸತ್ಯಕೃಷ್ಣ ಭಟ್ ಗುರು ಭಕ್ತಿಯ ಬಗ್ಗೆ ಮಾತನಾಡಿದರು ಪುರೋಹಿತ್ ಲೋಲಾಕ್ಷ ಆಚಾರ್ಯ ಆನೆಗುಂದಿ ಪರಂಪರೆಯ ಬಗ್ಗೆ ತಿಳಿಸಿದರು.

ಶ್ರೀ ಸ್ವಾಮೀಜಿಯವರು ತಮ್ಮ ಅನುಗ್ರಹ ಭಾಷಣದಲ್ಲಿ ಸತ್ಕಾರ್ಯ ಸತ್ ಚಿಂತನೆ ನಿತ್ಯಾನುಷ್ಠಾನ ಮೂಲಕ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಎಲ್ಲವೂ ಭಗವಂತನ ಕೃಪಾಕಟಾಕ್ಷದಿಂದಾಗಿ ಏಳಿಗೆ ಕಂಡು ಬರುವುದರಲ್ಲಿ ಸಂದೇಹವಿಲ್ಲ .ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಭಗವಂತನ ಸ್ಮರಣೆ ನಿತ್ಯ ಮಾಡುವುದರಿಂದ ನಮ್ಮ ಬದುಕಿನಲ್ಲಿ ಇರುವ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಗುರುಸ್ಪಂದನಾ ಕಾರ್ಯಕ್ರಮ ಮನೆ ಮನೆಗಳಲ್ಲಿ ಯಶ್ವಸಿಯಾಗಿ ನಡೆದು ಸಮಾಜದ ಎಲ್ಲರ ಕಷ್ಟಗಳು ಶೀಘ್ರದಲ್ಲಿ ಶ್ರೀ ಕಾಳಿಕಾಂಬೆಯ ಅನುಗ್ರಹದಿಂದ ಕ್ಷೀಪ್ರವಾಗಿ ಪರಿಹಾರವಾಗಲೆಂದು ಹೇಳಿದರು.

ಗುರು ಸ್ಪಂದನ ಕಾರ್ಯಕ್ರಮ ಮಂಗಳೂರು ಯಶಸ್ವಿಯಾಗಿ ಜರಗುವರೇ ಸಹಕರಿಸಿದ ಶ್ರೀ ಕ್ಷೇತ್ರದ ಆಡಳಿತ ಮಂಡಳಿಗೆ ಗುರು ಸೇವಾ ಪರಿಷತ್ತಿನ ಏಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಆಚಾರ್ಯ ಗುರು ಭಕ್ತಿ ಗುರುಪರಂಪರೆಯ ಬಗ್ಗೆ ಮಾತನಾಡಿದರು. ಶ್ರೀ ಕ್ಷೇತ್ರದ ಶಿಲಾಮಯ ಸುತ್ತು ಪೌಳಿ ಎಲ್ಲರ ಮನಪೂರ್ವಕ ಸಹಕಾರ ಅಪೇಕ್ಷಿದರು . ಕ್ಷೇತ್ರದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಮೂರನೇ ಮೊಕ್ತೇಸರ ಲೋಕೇಶ್ ಆಚಾರ್ಯ ಬಿಜೈ ಶ್ರೀಮದ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಬಿ ಸೂರ್ಯ ಕುಮಾರ್ ಶ್ರೀ ಕ್ಷೇತ್ರದ ಮಾಜಿ ಮೊಕ್ತೇಸರರು ಗುರುಸೇವಾ ಪರಿಷತ್ತಿನ ಸದಸ್ಯರು ಹಾಗು ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು. ಪಶುಪತಿ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Comments are closed.