ಕರಾವಳಿ

ಮಾಚಿದೇವ ಹಾಗೂ ಸವಿತಾ ಮಹರ್ಷಿಗಳಿಂದ ಸಮಾಜಕ್ಕೆ ಉತ್ತಮ ಸಂದೇಶ : ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು

Pinterest LinkedIn Tumblr

ಮಂಗಳೂರು ಫೆಬ್ರವರಿ 02 :ಮಹನೀಯರಾದ ಮಾಚಿದೇವ ಹಾಗೂ ಸವಿತಾ ಮಹರ್ಷಿಗಳು ಸಮಾಜಕ್ಕೆ ನೀಡಿದ ಸಂದೇಶ, ಅವರ ತ್ಯಾಗಮಯ ವ್ಯಕ್ತಿತ್ವವನ್ನು ಗುರುತಿಸಿ ಸರಕಾರವು ಇಂತಹ ಮಹಾವ್ಯಕ್ತಿಗಳ ಆಚರಣೆಯನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಹೇಳಿದರು.

ನಗರದ ತುಳುಭವನದಲ್ಲಿ ನಡೆದ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದರು.

ಜಾತಿ, ಮತ ಬೇಧಗಳನ್ನು ಮರೆತು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ ಈ ಮಹಾನ್ ಸಂತರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಂದಿನ ಕಾಲದಲ್ಲಿ ತಮ್ಮ ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಅವರ ಜೀವನವನ್ನೇ ಮುಡಿಪಾಗಿಡುವ ಕಾರ್ಯವನ್ನು ಮಾಡಿರುತ್ತಾರೆ ಎಂದರು.

ಸವಿತಾ ಮಹರ್ಷಿ ಬಗ್ಗೆ ಉಪನ್ಯಾಸ ನೀಡಿದ ಕರಾವಳಿ ಬಿಎಡ್ ಕಾಲೇಜಿನ ಉಪನ್ಯಾಸಕಿ ಮಾಧುರಿ ಶ್ರೀರಾಮ್, ಸವಿತಾ ಮಹರ್ಷಿ ಪರಿಪೂರ್ಣತೆ ಹಾಗೂ ವೈವಿದ್ಯಮಯ ಆಚಾರ ವಿಚಾರ ಹೊಂದಿದ ವ್ಯಕ್ತಿತ್ವ ಹೊಂದಿರುವ ಮಹರ್ಷಿಗಳಾಗಿದ್ದರು. ಸವಿತಾ ಮಹರ್ಷಿ ಶಿವನ ಕಣ್ಣಿನಿಂದ ಹುಟ್ಟಿದವರು, ಶಿವನಿಂದ ಸಂಗೀತ ಪರಿಕರಗಳನ್ನು ಪಡೆದುಕೊಂಡವರು ಎಂದು ಉಲ್ಲೇಖಗಳು ಹೇಳುತ್ತವೆಎಂದರು.

ಸವಿತಾ ಮಹರ್ಷಿಯ ಜೀವನ ಕುರಿತಂತೆ ಪುರಾಣದ ಕತೆಯನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ 1.24 ಕೋಟಿ ಹಾಗೂ ಕರ್ನಾಟಕದಲ್ಲಿ 394000 ಜನಸಂಖ್ಯೆಯನ್ನು ಸವಿತಾ ಸಮುದಾಯ ಹೊಂದಿದೆ ಎಂದು ಹೇಳಿದರು.

ಮಾಚಿದೇವರ ಬಗ್ಗೆ ಉಪನ್ಯಾಸ ನೀಡಿದ ಸುರತ್ಕಲ್ ಎನ್‍ಐಟಿಕೆ ನಿವೃತ್ತ ಅಧ್ಯಾಪಕ ವಿಶ್ವನಾಥ್ ಪಿ ಕಾಟಿಪಳ್ಳ, ಬಸವಣ್ಣನವರ ಮುಖ್ಯ ಅನುಯಾಯಿಗಳಲ್ಲಿ ಮಾಚೀದೇವರು ಒಬ್ಬರಾಗಿದ್ದು, 12ನೇ ಶತಮಾನದಲ್ಲಿನಸ್ಪಶ್ಯತೆ, ದುರ್ಬಲರ ಮೇಲಿನ ಶೋಷಣೆ ವಿರುದ್ಧ ಧ್ವನಿ ಎತ್ತಿದವರು. ಸಮಾಜದ ಕಲ್ಮಶಗಳಿಗೆ ಪೂರ್ಣವಿರಾಮ ನೀಡಲು ಹೋರಾಡಿದವರು. ಮೂರು ಸಾವಿರಕ್ಕೂ ಮಿಕ್ಕಿ ವಚನಗಳನ್ನು ರಚಿಸಿದ್ದಾರೆ ಎಂದು ಮಾಚಿದೇವನ ಜೀವನ ಶೈಲಿ, ಸಾಧನೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್‍ಕುಮಾರ್ ಕಲ್ಕೂರ, ದ.ಕ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ದ.ಕ ಜಿಲ್ಲಾ ಮಡಿವಾಳ ಸಂಘದ ಕಾರ್ಯದರ್ಶಿ ಭಾಸ್ಕರ್ ಬೇಕಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್.ಜಿ ಉಪಸ್ಥಿತರಿದ್ದರು.

Comments are closed.