ಕರಾವಳಿ

ಬಸ್ಸಿನಲ್ಲೇ ದಂಪತಿ ವಿಷ ಸೇವಿಸಿದ ಪ್ರಕರಣ- ಪತಿ ಸಾವು, ಪತ್ನಿ ಗಂಭೀರ

Pinterest LinkedIn Tumblr

ಕುಂದಾಪುರ: ಕೊಲ್ಲೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ ಮಗುವಿಗೂ ವಿಷ ಕುಡಿಸಿ, ತಾವು ವಿಷ ಸೇವಿಸಿದ ದಂಪತಿಗಳಲ್ಲಿ ಪತಿ ಮೃತಪಟ್ಟಿದ್ದು, ಪತ್ನಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆ ಹಾಗೂ ಮಗು ಉಡುಪಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ಸಿನಲ್ಲಿಯೇ ವಿಷ ಕುಡಿದ ದಂಪತಿಗಳಲ್ಲಿ ರಾಜಕುಮಾರ್ (35) ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಗುರುವಾರ ರಾತ್ರಿ ಮೃತಪಟ್ಟಿದ್ದು, ಸಂಗೀತಾ (28) ವೆನ್‌ಲಾಕ್ ಆಸ್ಪತ್ರೆ ತೀವ್ರ ನಿಗಾ ವಿಭಾಗದಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಮಗು ಉಡುಪಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚೇತಿರಿಸಿಕೊಳ್ಳುತಿದೆ ಎನ್ನಲಾಗಿದೆ.

ತಮಿಳುನಾಡು ಮೂಲದ ರಾಜಕುಮಾರ್ ಹಾಗೂ ಪತ್ನಿ ಸಂಗೀತಾ ಅಂಬಲಪಾಡಿ ಬೈಪಾಸ್ ಬಳಿ ವಾಸ ಮಾಡುತ್ತಿದ್ದು, ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದರ್ಶನಕ್ಕೆ ತೆರೆಳಿದ್ದರು. ಕೊಲ್ಲೂರಿಂದ ತಿರುಗಿ ಬರುವಾಗ ಬಸ್‌ನಲ್ಲಿ ವಿಷ ಸೇವಿಸಿದ್ದರು. ವಿಷ ಸೇವಿಸಿದ ಸಂಗತಿಯನ್ನು ಕಂಡಕ್ಟರ್ ಸತೀಶ್ ಮೂಲಕ ತಿಳಿದ ಕೂಡಲೇ ಬಸ್ ಚಾಲಕ ಇಕ್ಬಾಲ್ ಬಸ್ ಎಲ್ಲೂ ನಿಲ್ಲಿಸದೆ, ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಂಪತಿ ಹಾಗೂ ಮಗುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯದಲ್ಲೇ ಪತಿ ರಾಜಕುಮಾರ್ ಮೃತಪಟ್ಟಿದ್ದು, ಪತ್ನಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೆನ್‌ಲಾಕ್ ಆಸ್ಪತ್ರೆ ಎಂಡಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ-

ಕೊಲ್ಲೂರು-ಮಂಗಳೂರು ಬಸ್ಸಿನಲ್ಲಿ ವಿಷ ಸೇವಿಸಿದ ದಂಪತಿ: ಜೀವ ಉಳಿಸಲು ಎಕೆಎಂಎಸ್ ಬಸ್ ಚಾಲಕನ ಹರಸಾಹಸ

Comments are closed.