ಕರಾವಳಿ

ಕೊಲ್ಲೂರು-ಮಂಗಳೂರು ಬಸ್ಸಿನಲ್ಲಿ ವಿಷ ಸೇವಿಸಿದ ದಂಪತಿ: ಜೀವ ಉಳಿಸಲು ಎಕೆಎಂಎಸ್ ಬಸ್ ಚಾಲಕನ ಹರಸಾಹಸ

Pinterest LinkedIn Tumblr

ಕುಂದಾಪುರ: ಕೊಲ್ಲೂರಿನಿಂದ ಮಂಗಳೂರಿಗೆ ಸಾಗುವ ಬಸ್ಸಿನಲ್ಲಿದ್ದ ದಂಪತಿ ಗುರುವಾರ ಮಧ್ಯಾಹ್ನ ಬಸ್ಸಿನಲ್ಲೇ ವಿಷ ಸೇವಿಸಿದ್ದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿ ಅಂಬಲಪಾಡಿ ಬೈಪಾಸ್ ಬಳಿ ಟೆಂಟ್‌ನಲ್ಲಿ ವಾಸ ಮಾಡುತ್ತಿರುವ ತಮಿಳುನಾಡು ಮೂಲದ ವಲಸೆ ಕಾರ್ಮಿಕ ರಾಜಕುಮಾರ್ (35), ಪತ್ನಿ ಸಂಗೀತಾ (28) ವಿಷ ಸೇವಿಸಿದ್ದು ಅವರೊಂದಿಗಿದ್ದ ಒಂದೂವರೆ ವರ್ಷದ ಗಂಡು ಮಗುವಿಗೆ ವಿಷ ಪ್ರಾಶನವಾಗಿದೆಯೇ ಎಂಬುವ ಗುಮಾನಿ ಮೇರೆಗೆ ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಕುಮಾರ್ ತಮಿಳಿನಲ್ಲಿ ಡೆತ್ ನೋಟ್ ಬರೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ರಾಜಕುಮಾರ್ ಹಾಗೂ ಸಂಗೀತ ಮಗುವಿನ ಜೊತೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದರು. ದೇವರ ದರ್ಶನ ಪಡೆದು, ಅನ್ನ ಪ್ರಸಾದ ಸ್ವೀಕರಿಸಿದ ನಂತರ ಕೊಲ್ಲೂರು ಮಂಗಳೂರು ಬಸ್ ಏರಿದ್ದರು. ಬಸ್ ಏರದ ನಂತರವೋ ಬಸ್ ಏರುವ ಮುನ್ನಾ ವಿಷ ಸೇವಿಸಿದ್ದರ ಎನ್ನೋದು ಸ್ಪಷ್ಟವಾಗಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪತಿ,ಪತ್ನಿ ಸೀಟಿನಲ್ಲಿ ನರಳಾಡುತ್ತಿರುವುದು ನಿರ್ವಾಕ ಗಮನಿಸಿದ್ದಾರೆ. ವಂಡ್ಸೆ ದಾಟಿದ ನಂತರ ವಿಷದ ಪ್ರಭಾವ ಹೆಚ್ಚಾಗಿ ಪತಿ,ಪತ್ನಿ ನರಾಳಾಟ ಹೆಚ್ಚಾಗಿದೆ. ಕಟ್‌ಬೆಲ್ತೂರು ಬಳಿ ಸೀಟಿನಲ್ಲಿ ಒದ್ದಾಡುತ್ತಿದ್ದು ಇಬ್ಬರನ್ನು ನಿರ್ವಾಹಕ ನೋಡಿದ್ದು, ಬಾಯಲ್ಲಿ ನೊರೆ ಬರುವುದ ಕಂಡು ವಿಷ ಸೇವಿಸಿದ್ದಾರೆ ಎಂದು ಗೊತ್ತಾಗಿದೆ. ತಕ್ಷಣ ನಿರ್ವಾಹಕ ಚಾಲಕ್ ಇಕ್ಬಾಲ್ ಗಮನಕ್ಕೆ ತಂದಿದ್ದು, ಅಲ್ಲಿಂದ ಬಸ್ ನೇರ ಕುಂದಾಪುರ ಸರ್ಕಾರಿ ಆಸ್ಪತ್ರೆ ತಂದಿದ್ದಾರೆ. ಬಸ್ಸಿನಲ್ಲಿ ಪತಿ ಪತ್ನಿ ವಿಷ ಕುಡಿದ ಬಗ್ಗೆ ಸಹಾಯವಾಣಿ ತಿಳಿಸಿದ್ದರಿಂದ ಅವರೂ ಆಸ್ಪತ್ರೆ ಬಳಿ ಆಗಮಿಸಿದ್ದು, ತಕ್ಷಣ ಬಸ್ಸಿಂದ ದಂಪತಿ ಇಳಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಬಸ್ ಚಾಲಕ, ನಿರ್ವಾಹಕನ ಮಾನವೀಯತೆ….
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ಮಾಡಿ ರಾಜಕುಮಾರ್ ಮತ್ತು ಪತ್ನಿ ಸಂಗೀತಾ ಕೊಲ್ಲೂರು ಮಂಗಳೂರಿಗೆ ಹೋಗುವ ಎಕೆಎಂಎಸ್ ಬಸ್ ಹತ್ತಿದ್ದರು. ಕೊಲ್ಲೂರಿನಿಂದ ಉಡುಪಿಗೆ ಟಿಕೆಟ್ ಪಡೆದಿದ್ದು, ಕೊಲ್ಲೂರಿಂದ ಹೊರಟ ನಂತರ ಬಸ್ಸಿನಲ್ಲೇ ವಿಷ ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡು ನರಳಾಡುತಿದ್ದ ಪತಿ,ಪತ್ನಿಯನ್ನಹ ಕಂಡಕ್ಟರ್ ಸತೀಶ್ ಗಮನಿಸಿದ್ದು ಬಾಯಲ್ಲಿ ನೊರೆ ಬರುತ್ತಿರುವುದರಿಂದ ವಿಷ ಸೇವಿಸಿದ್ದಾರೆ ಎಂದು ತಿಳಿದು ಬಸ್ ಚಾಲಕ ಇಕ್ಬಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಜಾಗೃತಗೊಂಡ ಚಾಲಕ ಇಕ್ಬಾಲ್,ಬಸ್ ಕಟ್‌ಬೇಲ್ತೂರಿಂದ ಕುಂದಾಪುರದವರೆಗಿನ ಯಾವುದೇ ಬಸ್ ನಿಲುಗಡೆ ಪ್ರದೇಶದಲ್ಲು ಬಸ್ ನಿಲ್ಲಿಸದೇ ನೇರವಾಗಿ ಕುಂದಾಪುರಕ್ಕೆ ಬಸ್ ತಂದಿದ್ದಾರೆ. ಈ ಮೊದಲು ಬಿಜೆಪಿ ಮುಖಂಡ ಶಂಕರ್ ಅಂಕದಕಟ್ಟೆ ಬಳಿ ವಿಚಾರ ತಿಳಿಸಿದ್ದು ಅವರು ಕೂಡ ಸರಕಾರಿ ಆಸ್ಪತ್ರೆ ವೈದ್ಯರಿಗೆ ಮೊದಲೆ ಮಾಹಿತಿ ನೀಡಿದ್ದರು. ಇತ್ತ ಬಸ್ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ವಠಾರದ ಒಳಗೆ ನುಗ್ಗಿಸಿ ಇಬ್ಬರನ್ನು ಆಸ್ಪತ್ರೆ ದಾಖಲಿಸಿದ್ದು, ಸಹಾಯವಾಣಿ ಸದಸ್ಯರು ದಂಪತಿಯನ್ನು ಆಸ್ಪತ್ರೆ ಒಳಗೆ ಕರೆತಂದಿದ್ದಾರೆ. ವಿಷ ಸೇವಿಸಿದ ಇಬ್ಬರಿಗೂ ತಕ್ಷಣ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಬಸ್ ಆಸ್ಪತ್ರೆಗೆ ಎಲ್ಲೂ ನಿಲ್ಲಿಸಿದೇ ಕರೆತಂದ ಚಾಲಕ ಇಕ್ಬಾಲ್ ಹಾಗೂ ನಿರ್ವಾಹಕ ಸತೀಶ್ ಸೇವೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.