ಕರಾವಳಿ

ಕಣ್ಣೂರು ವಾರ್ಡಿನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಕಣ್ಣೂರು ವಾರ್ಡಿನ ಪೂಮಾಡಿಯಲ್ಲಿ ತೋಡಿನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಕುರಿತು ಮಾತನಾಡಿರುವ ಅವರು, ಮಳೆಗಾಲದ ಸಂಧರ್ಭದಲ್ಲಿ ಕಣ್ಣೂರು ವಾರ್ಡಿನ ಪೂಮಾಡಿ ಬಳಿಯಿರುವ ತೋಡಿನಲ್ಲಿ ತುಂಬಿ ಕೃತಕ ನೆರೆ ಬರುವ ಪರಿಸ್ಥಿತಿ ಇದೆ. ಈ ಬಗ್ಗೆ ಇಲ್ಲಿನ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದರು. ಅದಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ ಈ ಅನುದಾನ ಜೋಡಿಸಿ ಕಾಮಗಾರಿಗೆ 50 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಕಡೆಗಳಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಚರಂಡಿ, ತೋಡುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಕಣ್ಣೂರು ವಾರ್ಡಿನಲ್ಲೂ ಕೂಡ ಅಂತಹ ಸ್ಥಳಗಳಿದ್ದರೆ ಅನುದಾನ ಒದಗಿಸಿ ಅಭಿವೃದ್ಧಿಪಡಿಸಲಾಗುವುದು.ಸದ್ಯ ಗುದ್ದಲಿಪೂಜೆ ನೆರವೇರಿಸಿರುವ‌ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಮನಪಾ ಸದಸ್ಯರಾದ ಚಂದ್ರಾವತಿ ವಿಶ್ವನಾಥ್, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್ ಪಾಂಡೇಶ್ವರ, ರೂಪ ಶ್ರೀ ಪೂಜಾರಿ, ಬಿಜೆಪಿ ಮುಖಂಡರಾದ ವಿಶ್ವನಾಥ್, ಸರ್ವಾಣಿ ಬಲ್ಲೂರು, ದೇವದಾಸ್ ಶೆಟ್ಟಿ, ಸುನಿಲ್ ಕೊಡಕ್ಕಲ್, ಶ್ರೀಧರ್ ಭಂಡಾರಿ, ಗೀತಾನಂದ ಶೆಟ್ಟಿ, ಜಗದೀಶ್ ಕುಲಾಲ್, ವಸಂತ್ ಶೆಟ್ಟಿ, ರಮೇಶ್ ಪೂಜಾರಿ ವೀರನಗರ, ನವೀನ್ ಕುಲಾಲ್, ಯುವರಾಜ್,ಮೀನಾಕ್ಷಿ, ಮೋಹಿನಿ, ರಮೇಶ್ ಬಲ್ಲೂರು, ರವಿ ಗಟ್ಟಿ ವೀರನಗರ, ಮನೋಜ್ ವೀರನಗರ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.