ಕರಾವಳಿ

ಪ್ರೋ ಇಂಡಿಯಾ ಮಾಯಿಥಾಯ್ ಚಾಂಪಿಯನ್ ಶಿಪ್‌ಗೆ ತೆರೆ : ಫೈನಲ್ ಕಾದಾಟದಲ್ಲಿ 26 ಫೈಟರ್‌ಗಳಿಂದ 13 Super ಫೈಟ್

Pinterest LinkedIn Tumblr

ಮಂಗಳೂರು, ನವೆಂಬರ್. 25 :: ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನವೆಂಬರ್ 20ರಿಂದ .24ರ ವರೆಗೆ ಆಯೋಜಿಸಲಾದ ಪ್ರೊ ಇಂಡಿಯಾ ಮಾಯ್‌ಥಾಯ್‌ ಚಾಂಪಿಯನ್‌ಶಿಪ್‌ (Pro-India MuayThai Legue) ಪಂದ್ಯಾಟಕ್ಕೆ ರವಿವಾರ ಸಂಜೆ ತೆರೆಬಿದ್ದಿತು.

ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ಅಥಿಗಳಾಗಿ ಪಾಲ್ಗೊಂಡ ಮೊಯ್‌ಥಾಯ್ ಅಸೋಸಿಯೇಶನ್‌ನ ಬ್ರಾಂಡ್ ಅಂಬಾಸಿಡರ್ ಬಾಲಿವುಡ್‌‍ನ ಕಿರುತೆರೆ ನಟ ಅಲಿ ಹಸನ್ ಮಾತನಾಡಿ, ಮೊಯ್‌ಥಾಯ್ ಯುವಕರ ಶಕ್ತಿಯನ್ನು ಪ್ರತಿನಿಧಿಸುವಂತಹ ಕ್ರೀಡೆಯಾಗಿದೆ. ದೇಶದಲ್ಲಿ ಈ ಕ್ರೀಡೆಯು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಅಸೋಸಿಯೇಶನ್ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿ ಮಾತನಾಡಿ, ಮೊಯ್‌ಥಾಯ್ ಕ್ರೀಡೆ ಥೈಲ್ಯಾಂಡ್‌ನಲ್ಲಿ ಆರಂಭಗೊಂಡು ಭಾರತದಲ್ಲೂ ತನ್ನ ಹೆಜ್ಜೆಯನ್ನು ಮೂಡಿಸುತ್ತಿದೆ. ಭಾರತೀಯರು ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಮೊಯ್‌ಥಾಯ್‌ನತ್ತ ಆಸಕ್ತಿ ತೋರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾದ ಈ ಪಂದ್ಯಾಟದಲ್ಲಿ ದೇಶದ 27 ರಾಜ್ಯಗಳ ಸುಮಾರು 450ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.ಇದು ದೇಶದಲ್ಲೇ ಅತ್ತಂತ ದೊಡ್ಡ ಪಂದ್ಯಾಟವಾಗಲಿದ್ದು ಮಂಗಳೂರಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ. ದ.ಕ ಜಿಲ್ಲೆಯಲ್ಲಿ ಸತತ ಐದು ದಿನ ನಡೆಯುವ ಈ ಪಂದ್ಯಾಟದ ಸಂಪೂರ್ಣ ನಿರ್ಣಾಯಕರು ರಾಷ್ಟ್ರೀಯ ಮೂಯಿಥಾಯಿ ಎಸೋಸಿಯೇಶನ್‌ನವರೇ ಆಗಿದ್ದು ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ .27 ರಾಜ್ಯಗಳ 400 ಅಧಿಕ ಕ್ರೀಡಾಳುಗಳು ಭಾಗವಹಿಸಿದ್ದು, ಕ್ರೀಡಾಳುಗಳ ಎಲ್ಲಾ ವ್ಯವಸ್ಥೆಗಳನ್ನು (ಊಟ ವಸತಿ) ಮಂಕಿ ಮೆಹಮ್ ಫೈಟ್ ಕ್ಲಬಿನವರು ವಹಿಸಿಕೊಂಡು ಅತ್ತಂತ ವ್ಯವಸ್ಥಿತ ರೀತಿಯಲ್ಲಿ ಪಂದ್ಯಾಟದ ಯಶಸ್ವಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಮಾಯಿಥಾಯ್ ಎಸೋಶಿಯಸ್‌ನ ರಾಜ್ಯಾಧ್ಯಕ್ಷರಾದ ರಾಜಗೋಪಾಲ್ ರೈ ಅವರು ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ತಿಳಿಸಿದರು.

ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಸ್ವಾಗತಿಸಿದರು. ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಕೃಷ್ಣ ಜೆ.ಪಾಲೆಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ನೇಮರಾಜ ರೈ, ಎಂಆರ್‌ಪಿಎಲ್ ಅಧಿಕಾರಿ ರುಡಾಲ್ಫ್ ನೊರೊನ್ಹಾ, ಒಎನ್‌ಜಿಸಿ ಅಧಿಕಾರಿ ವಿವೇಕ್ ಮಲ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಡಿಸಿಪಿ ಲಕ್ಷ್ಮೀ ಗಣೇಶ್, ಮಾಜಿ ಮೇಯರ್, ಕಾರ್ಪೊರೇಟರ್ ಶಶಿಧರ ಹೆಗ್ಡೆ, ಬಜರಂಗದಳದ ರಾಜ್ಯ ಸಂಚಾಲಕ ಶರಣ್ ಪಂಪ್‌ವೆಲ್,ಮಾಯಿಥಾಯ್ ಎಸೋಶಿಯಸ್‌ನ ಸಚಿನ್ ರಾಜ್‌ಗೋಪಾಲ್ ರೈ, ಪ್ರಮುಖರಾದ ಚಂದ್ರಹಾಸ್ ರೈ, ಬಶೀರ್ ಬೈಕಂಪಾಡಿ, ಬಾಲಕೃಷ್ಣ ಶೆಟ್ಟಿ, ರವಿಶಂಕರ್ ಮಿಜಾರ್, ಸಮಿತಿ ಸದಸ್ಯರಾದ ರಾಘವೇಂದ್ರ ಎಸ್. ಸ್ವರ್ಣಸುಂದರ್, ಡಿ.ಎಂ.ಅಸ್ಲಾಂ ಮೊದಲಾದವರು ಉಪಸ್ಥಿತರಿದ್ದರು.

ಫೈನಲ್ ಕಾದಾಟದಲ್ಲಿ 26 ಫೈಟರ್‌ಗಳಿಂದ 13 ಫೈಟ್ :

ಫೈನಲ್ ಕಾದಾಟದಲ್ಲಿ 26 ಫೈಟರ್ ಗಳು ಪಾಲ್ಗೊಂಡಿದ್ದು, ಒಟ್ಟು 13 ಫೈಟ್ ನಡೆಯುವ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ. ಮಂಗಳೂರಿನ ಮಂಕಿ ಮೇಹೆಂ ಫೈಟ್ ಕ್ಲಬಿನ 6 ಫೈಟರ್ ಗಳು ಈ ಅಂತಿಮ ಸ್ಫರ್ದೆಯಲ್ಲಿ ಪಾಲ್ಗೊಂಡಿದ್ದರು.

ನವೆಂಬರ್ 20ರಂದು ಜಿಲ್ಲಾಧಿಕಾರಿಗಳಿಂದ ಚಾಲನೆ :

ನವೆಂಬರ್ 20ರಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌.,ಮಂಗಳೂರು ದಕ್ಷಿಣ ಶಾಸಕ ಹಾಗೂ ಕಾರ್ಯಕ್ರಮ ಸಂಘಟಕ ವೇದವ್ಯಾಸ ಕಾಮತ್‌, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉದ್ಯಮಿ ಕೆ.ಸಿ.ನ್ಯಾಕ್‌, ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ, ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಜಗದೀಶ್‌ ಅಧಿಕಾರಿ, ಸುನೀಲ್‌ ಆಚಾರ್‌, ರೂಪೇಶ್‌ ಶೆಟ್ಟಿ, ಚಂದ್ರಹಾಸ್‌ ಶೆಟ್ಟಿ, ರಾಘವೇಂದ್ರ ರಾವ್‌, ಸ್ವರ್ಣಸುಂದರ್‌, ಬಶೀರ್‌ ಬೈಕಂಪಾಡಿ, ಯತೀಶ್‌ ಬೈಕಂಪಾಡಿ, ಸಚಿನ್‌ ರಾಜ್‌ ರೈ, ಬಿಪಿನ್‌ ರಾಜ್‌, ನಿತೀಶ್‌ ಕುಮಾರ್‌, ಮಹೇಶ್‌ ಪಾಂಡ್ಯ, ಡಿ.ಎಂ. ಅಸ್ಲಾಂ, ಚೇತನ್‌, ಬಾಲಕೃಷ್ಣ ಶೆಟ್ಟಿ, ಚೇತನ್‌ ಅಶ್ವಥಾಮ ಮುಂತಾದವರು ಉಪಸ್ಥಿತರಿದ್ದರು.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

Comments are closed.