ಮನೋರಂಜನೆ

ಪತಿ ಜೊತೆ ಡುಯೆಟ್‌ ಹಾಡಲ್ಲ ಎಂದ ಬಾಲಿವುಡ್ ನಟಿ

Pinterest LinkedIn Tumblr


ಗ್ಲೋಬಲ್‌ ಐಕಾನ್‌ ಪ್ರಿಯಾಂಕಾ ಚೋಪ್ರಾ ತಮಗೆ ಹಾಡಲು ಗೊತ್ತಿದ್ದರೂ ಪತಿ ನಿಕ್‌ ಜೊತೆಗೆ ಮಾತ್ರ ಹಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ಸಂಗೀತವೆಂದರೆ ಇಷ್ಟ. ಆದರೆ ಇದಕ್ಕೆ ಅಗತ್ಯವಿರುವ ಸಂಗೀತ ಶಿಕ್ಷಣವನ್ನು ನಾನು ಪಡೆದಿಲ್ಲ. ನಿಕ್‌ ಜೊನಾಸ್‌ ಹಾಡು ಬರೆಯುತ್ತಾರೆ, ಸಂಗೀತ ಸಂಯೋಜನೆ ಮಾಡುತ್ತಾರೆ ಮತ್ತು ಹಾಡುತ್ತಾರೆ. ಆದರೆ ನಾನು ಹಾಡನ್ನು ಕೇವಲ ಇಷ್ಟಪಡುತ್ತೇನೆ. ಇದಕ್ಕಾಗಿ ನಾನು ಎಂದಿಗೂ ಪತಿ ಜೊತೆ ಡುಯೆಟ್‌ ಹಾಡಲಾರೆ ಎಂದಿದ್ದಾರೆ.

ಪ್ರಿಯಾಂಕಾ ಈ ಮೊದಲು ಕೆಲವು ಕಡೆ ಹಾಡಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಲ್ಲದೆ ನಿಕ್‌ ಜೊನಾಸ್‌ರ ಆಲ್ಬಂವೊಂದರಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಪತಿ ಜೊತೆಗೆ ಹಾಡುವಷ್ಟು ಪ್ರಬುದ್ಧತೆ ತಮ್ಮಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಈಗಾಗಲೆ ತಮ್ಮ ಪತಿಯ ಮ್ಯೂಸಿಕ್ ವಿಡಿಯೋದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಸಂಗೀತ ಎಂದರೆ ನನಗೆ ಇಷ್ಟ, ಆದರೆ ಅದಕ್ಕೆ ಬೇಕಾದ ಶಿಕ್ಷಣವನ್ನು ನಾನು ಪಡೆದಿಲ್ಲ ಎಂದಿದ್ದಾರೆ. ಪ್ರತಿ ಮುಂಜಾನೆ ರೇಡಿಯೋದಲ್ಲಿ ಮೂಡಿಬರುವ ನಿಕ್‌ರ ‘ಎವೆರಿ ಮಾರ್ನಿಂಗ್’ ಹಾಡುಗಳನ್ನು ನಾನು ಕೇಳಲ್ಲ. ಯಾಕೆಂದರೆ ನಿಕ್ ಪ್ರತಿ ಮುಂಜಾನೆ ನನಗೆ ಲೈವ್ ಆಗಿ ಸಂಗೀತ ಕೇಳಿಸುತ್ತಾರೆ ಎಂದಿದ್ದಾರೆ ಪಿಗ್ಗಿ.

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಜನಪ್ರಿಯತೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಆನ್‌ಲೈನ್‌ನಲ್ಲಿ ಹೆಚ್ಚು ಸರ್ಚ್‌ಗೆ ಒಳಗಾದ ಭಾರತೀಯ ಸಿಲೆಬ್ರಿಟಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಮೆರಿಕದ ಸಂಸ್ಥೆಯೊಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಅಂತರ್ಜಾಲದಲ್ಲಿ ಹೆಚ್ಚು ಹುಡುಕಾಡಲ್ಪಟ್ಟ ಭಾರತೀಯ ಸಿಲೆಬ್ರಿಟಿಗಳ ಲಿಸ್ಟ್‌ನಲ್ಲಿ ಪ್ರಿಯಾಂಕಾ ಹೆಸರು ಟಾಪ್‌ನಲ್ಲಿದೆ.

ಬಾಲಿವುಡ್‌ ಸ್ಟಾರ್‌ಗಳಾಗಿರುವ ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ ಮುಂತಾದವರನ್ನೆಲ್ಲಾ ಹಿಂದಿಕ್ಕಿ ಪ್ರಿಯಾಂಕಾ ಈ ಲಿಸ್ಟ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎಂಬುದು ಮತ್ತೊಂದು ವಿಶೇಷ. ಪ್ರಿಯಾಂಕಾ ಚೋಪ್ರಾ ಹಿಂದಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ‘ದಿ ಸ್ಕೈ ಈಸ್ ಪಿಂಕ್’. ಇದೀಗ ರಾಜ್ ಕುಮಾರ್ ರಾವ್ ಜೊತೆಗಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Comments are closed.