ಕರಾವಳಿ

ಪಾರೆಕೋಡಿ ಗಣಪತಿ ಭಟ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ; ಸೆಪ್ಟಂಬರ್ 14ರಂದು ಪ್ರದಾನ

Pinterest LinkedIn Tumblr

ಮಂಗಳೂರು : ಪುತ್ತೂರು, ಸುರತ್ಕಲ್,ಬಪ್ಪನಾಡು,ಬೆಂಕಿನಾಥೇಶ್ವರ,ಸುಬ್ರಹ್ಮಣ್ಯ ಮೇಳಗಳಲ್ಲಿ ಹಾಗೂ ಹವ್ಯಾಸಿ ಕಲಾ ಸಂಘಗಳಲ್ಲಿ ಭಾಗವತರಾಗಿ ಕಲಾ ಸೇವೆ ನೀಡುತ್ತಾ ಬಂದಿರುವ ಶ್ರೀ ಪಾರೆಕೋಡಿ ಗಣಪತಿ ಭಟ್ ಅವರಿಗೆ ಭ್ರಾಮರೀ ಯಕ್ಷಮಿತ್ರರು ( ರಿ) ಮಂಗಳೂರು ಬಳಗವು ಈ ಭಾರಿಯ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಯನ್ನು ನೀಡಿ ಗೌರವಿಸಲಿದೆ.

ನೇಪಥ್ಯ ಕಲಾವಿದರಿಗೆ ನೀಡಲಾಗುವ ಪ್ರಶಸ್ತಿಯನ್ನುಕಟೀಲು ಮೇಳ,ಹೊಸನಗರ ಮೇಳ,ಎಡನೀರು, ಪ್ರಸ್ತುತ ಹನುಮಗಿರಿ ಮೇಳದಲ್ಲಿ ನೇಪಥ್ಯ ಕಲಾವಿದರಾಗಿ ಕಲಾ ಸೇವೆ ಮಾಡುತ್ತಿರುವ ಶ್ರೀ ಕೃಷ್ಣಪ್ಪ ಪೂಜಾರಿ* ಹಾಗೂ ಕಟೀಲು ಮೇಳ, ಗಣೇಶ ಕಲಾವೃಂದ ಪೈವಳಿಕೆ,ಎಡನೀರು ಮೇಳಗಳಲ್ಲಿ ನೇಪಥ್ಯ ಕಲಾವಿದರಾಗಿದ್ದ *ಶ್ರೀ ನಾರಾಯಣ ಪುರುಷ* ಅವರಿಗೆ ನೀಡಿ ಗೌರವಿಸಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಸೆಪ್ಟಂಬರ್ 14 ಶನಿವಾರ ಸಂಜೆ 6.50 ಕ್ಕೆ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಜರಗಲಿದೆ.

ಸಭಾ ಕಾರ್ಯಕ್ರಮದ ಬಳಿಕ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಚೂಡಾಮಣಿ,ರಾಮಾಂಜನೇಯ,ದ್ರೌಪದಿ ಪ್ರತಾಪ* ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಪ್ರದರ್ಶನವಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶವಿರುತ್ತದೆ ಎಂದು ಭ್ರಾಮರೀ ಯಕ್ಷಮಿತ್ರರು ಮಂಗಳೂರು ಬಳಗ ಇವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.