
ಮಂಗಳೂರು: ‘ಸಮಾಜದ ದುರ್ಬಲ ಹಾಗೂ ಶೋಷಿತ ವರ್ಗದವರಿಗಾಗಿ ಕೈಗೊಳ್ಳುವ ವಿವಿಧ ಜನಪರ ಯೋಜನೆಗಳನ್ನು ದಾಖಲಿಸು ವುದರೊಂದಿಗೆ ಸದಭಿರುಚಿಯ ಓದುಗರನ್ನು ಬೆಳೆಸುವ ಸಲುವಾಗಿ ಟ್ರಸ್ಟ್ ನ ಮುಖವಾಣಿಯನ್ನು ಪ್ರಕಟಿಸಲಾಗುತ್ತಿದೆ’ ಎಂದು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ) ಇದರ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ.
ಪಡು ‘ಆಶ್ರಯ’ ಎಸ್ಟೇಟ್ ನಲ್ಲಿ ಜರಗಿದ ‘ಮರಿಯಲದ ಮಿನದನ ‘ಕಾರ್ಯಕ್ರಮದಲ್ಲಿ ‘ ಸದಾಶಯ’ ತ್ರೈಮಾಸಿಕದ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆನರಾ ಪ.ಪೂ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ,ಪ್ರಗತಿಪರ ಕೃಷಿಕ ಗುಂಡಿಲ ಶಂಕರ ಶೆಟ್ಟಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
‘ಸದಾಶಯ’ ದ ಪ್ರಧಾನ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಸಮುದಾಯದ ಸತ್ ಚಿಂತನೆಗಳ ಸುಂದರ ಅಭಿವ್ಯಕ್ತಿ ಯಾಗಿ ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತಿರುವ ಸದಾಶಯ ಪತ್ರಿಕೆ ಸುದ್ದಿ, ಮಾಹಿತಿ ಮತ್ತು ಸಾಹಿತ್ಯಿಕ ಮೌಲ್ಯಗಳೊಂದಿಗೆ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುತ್ತಿದೆ’ ಎಂದರು.
ಇದೇ ಸಂದರ್ಭದಲ್ಲಿ ಕಳೆದ ಮೂರು ದಶಕಗಳಲ್ಲಿ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಸುಳ್ಯದ ಸುಧಾಕರ ರೈ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಆಶ್ರಯ ಎಸ್ಟೇಟ್ ನ ಪಡು ಚಿತ್ತರಂಜನ್ ರೈ, ಶೆಡ್ಡೆ ಮಂಜುನಾಥ ಭಂಡಾರಿ, ಪೆರ್ಮುದೆ ಭುಜಂಗ ಶೆಟ್ಟಿ ,ಮೈನಾ ಸದಾನಂದ ಶೆಟ್ಟಿ, ಗಂಗಾರತ್ನ ಚಿತ್ತರಂಜನ್ ರೈ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಮಹಿಳಾ ವಿಭಾಗದ ವಿಜಯಲಕ್ಷ್ಮಿ ಬಿ.ಶೆಟ್ಟಿ, ಪದಾಧಿಕಾರಿಗಳಾದ ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ, ಜಿತೇಂದ್ರ ಶೆಟ್ಟಿ, ಸುನೀಲ್ ಶೆಟ್ಟಿ, ಹರೀಶ್ ಶೆಟ್ಟಿ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಸ್ವಾಗತಿಸಿದರು. ಸಂಪಾದಕ ಮಂಡಳಿಯ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ವಂದಿಸಿದರು.
Comments are closed.