
ಮಂಗಳೂರು,ಜೂನ್.30: ಕಳೆದ ಒಂದು ವರ್ಷಗಳಿಂದ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿ ಚಂದು ಹ್ಯಾರೀಸ್ ಎಂದು ಗುರುತಿಸಲಾಗಿದೆ.
ಆರೋಪಿಯ ಮೇಲೆ ಕಳ್ಳತನ ಮತ್ತು ಕೊಲೆಯತ್ನ ಸೇರಿದ್ದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿದ್ದು, ಈತ ಸುಮಾರು 1ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ.
ಈತನ ಮೇಲೆ ಬರ್ಕೆ, ಸುರತ್ಕಲ್, ಬರ್ಕೆ, ಮಂಗಳೂರು ಉತ್ತರ, ಪಣಂಬೂರು ಪೊಲೀಸ್ ಠಾಣಿಎಗಳಲ್ಲಿ ವಾರೆಂಟ್ ಬಾಕಿ ಇದ್ದು, ಇದೀಗ ಮಂಗಳೂರು ನಗರ ಪೊಲೀಸರು ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Comments are closed.