ಕರಾವಳಿ

ಮೋದಿ ಪ್ರಮಾಣ ವಚನ ಹಿನ್ನೆಲೆ : ಮಂಗಳೂರಿನಲ್ಲಿ 400 ಚೆಂಡು ಉಚಿತ ಮಲ್ಲಿಗೆಹೂವು ವಿತಸಿದ ಫಕೀರಬ್ಬ

Pinterest LinkedIn Tumblr

ಮಂಗಳೂರು : ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಇದೀಗ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿರವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭ ಮಂಗಳೂರಿನ ವಿವಿದೆಡೆಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ಮಂಗಳೂರಿನ ಸಿಟಿ ಸೆಂಟರ್ ಮುಂಭಾಗದ ವಸಂತಮಹಲ್ ಬಳಿ ಮಲ್ಲಿಗೆ ಹೂವಿನ ವ್ಯಾಪಾರಿ ಫಕೀರಬ್ಬ ಅವರು 100 ಅಟ್ಟೆ (400 ಚೆಂಡು) ಮಲ್ಲಿಗೆ ಹೂವನ್ನು ಮಹಿಳೆಯರಿಗೆ ಉಚಿತವಾಗಿ ಹಂಚಿದರು.

ಅಟೋ ರಿಕ್ಷಾ ಚಾಲಕರಿಂದ ಉಚಿತ ಪ್ರಯಾಣ ಸೇವೆ

ಮೋದಿ ಪ್ರಮಾಣ ವಚನಕ್ಜೆ ಉಪ್ಪಿನಂಗಡಿ ಯಲ್ಲಿ 15 ಅಟೋ ರಿಕ್ಷಾ ಚಾಲಕರಿಂದ ವಿನೂತನ ಸೇವೆ. 5 ಕಿ ಮೀ ವ್ಯಾಪ್ತಿಯೊಳಗಿನ ಪ್ರಯಾಣಿಕರಿಗೆ ದಿನವಿಡೀ ಉಚಿತ ಪ್ರಯಾಣ ಸೇವೆ. ದೇಶದ ಭವ್ಯ ಭವಿಷ್ಯದಲ್ಲಿ ಜನ ಸಾಮಾನ್ಯರಿಗೆ ಅನುಕೂಲವಿದೆ ಎಂಬುವುದಕ್ಕೆ ಸಾಕ್ಷಿಯಾಗಿ ಈ ರೀತಿಯ ಉಚಿತ ಸೇವೆ ಕೈಗೊಳ್ಳಲಾಯಿತು ಎಂದು ಚಾಲಕರು ತಿಳಿಸಿದ್ದಾರೆ..

ಉಚಿತ ಬಸ್ ಸೇವೆ :

ಭಾರತ ದೇಶದ 14ನೇ ಪ್ರಧಾನಮಂತ್ರಿಯಾಗಿ ಸನ್ಮಾನ್ಯ ಶ್ರೀ ದಾಮೋದರದಾಸ್ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುವ ಪ್ರಯುಕ್ತ ಮೂಡಬಿದ್ರೆ ಕಿನ್ನಿಗೋಳಿ ಹಳೆಯಂಗಡಿ ಸುರತ್ಕಲ್ ಮಂಗಳೂರಿಗೆ ಹೋಗುವ ಕೋಟ್ಯಾನ್ ಬಸ್ ನಲ್ಲಿ ಉಚಿತ ಸೇವೆಯನ್ನು ನೀಡಲಾಯಿತು.

Comments are closed.