
ಮಂಗಳೂರು : ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಭಾರತದ ಪ್ರಧಾನಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸುತ್ತಿರುವ ಸನ್ಮಾನ್ಯ ನರೇಂದ್ರ ದಾಮೋದರದಾಸ ಮೋದಿಯವರಿಗೆ ಬೆಂಬಲ ಸೂಚಿಸಿ ದೇಶದ ಮೂಲೆಗಳಲ್ಲಿ ಜನರು ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವ ಜೊತೆಗೆ ವೈವಿಧ್ಯ ರೀತಿಯ ಸೇವೆಗಳಲ್ಲೂ ತೊಡಗಿದರು.

ಮೋದಿ ಪ್ರಮಾಣ ವಚನಕ್ಜೆ ಉಪ್ಪಿನಂಗಡಿಯಲ್ಲಿ 15 ಅಟೋ ರಿಕ್ಷಾ ಚಾಲಕರಿಂದ ವಿನೂತನ ರೀತಿಯ ಸೇವೆ ನಡೆಯಿತು. 5 ಕಿ ಮೀ ವ್ಯಾಪ್ತಿಯೊಳಗಿನ ಪ್ರಯಾಣಿಕರಿಗೆ ದಿನವಿಡೀ ಉಚಿತ ಪ್ರಯಾಣ ಸೇವೆಯನ್ನು ನೀಡಲಾಯಿತು. ದೇಶದ ಭವ್ಯ ಭವಿಷ್ಯದಲ್ಲಿ ಜನ ಸಾಮಾನ್ಯರಿಗೆ ಅನುಕೂಲವಿದೆ ಎಂಬುವುದಕ್ಕೆ ಸಾಕ್ಷಿಯಾಗಿ ಈ ರೀತಿಯ ಉಚಿತ ಸೇವೆ ಮಾಡುತ್ತಿರುವುದಾಗಿ ಅಟೋ ರಿಕ್ಷಾ ಚಾಲಕ ತಿಳಿಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ವಿವಿದೆಡೆಗಳಲ್ಲಿ ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಭಾರತ ದೇಶದ 14ನೇ ಪ್ರಧಾನಮಂತ್ರಿಯಾಗಿ ಸನ್ಮಾನ್ಯ ಶ್ರೀ ದಾಮೋದರದಾಸ್ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುವ ಪ್ರಯುಕ್ತ ಮೂಡಬಿದ್ರೆ ಕಿನ್ನಿಗೋಳಿ ಹಳೆಯಂಗಡಿ ಸುರತ್ಕಲ್ ಮಂಗಳೂರಿಗೆ ಹೋಗುವ ಕೋಟ್ಯಾನ್ ಬಸ್ ನಲ್ಲಿ ಉಚಿತ ಸೇವೆಯನ್ನು ನೀಡಲಾಯಿತು.
ಮಂಗಳೂರಿನ ಸಿಟಿ ಸೆಂಟರ್ ಮುಂಭಾಗದ ವಸಂತಮಹಲ್ ಬಳಿ ಮಲ್ಲಿಗೆ ಹೂವಿನ ವ್ಯಾಪಾರಿ ಫಕೀರಬ್ಬ ಅವರು 100 ಅಟ್ಟೆ (400 ಚೆಂಡು) ಮಲ್ಲಿಗೆ ಹೂವನ್ನು ಮಹಿಳೆಯರಿಗೆ ಉಚಿತವಾಗಿ ಹಂಚಿದರು.
Comments are closed.