ಪ್ರಮುಖ ವರದಿಗಳು

ಸಪ್ತಪದಿ ತುಳಿಯಲು ಹೆಜ್ಜೆ ಹಾಕುತ್ತಿದ್ದಂತೆ ವರನ ಮೊಬೈಲ್‍ಗೆ ಬಂತು ವಧುವಿನ ನಗ್ನ ಫೋಟೋ ! ಮುಂದೆ ಏನಾಯಿತು ನೋಡಿ…

Pinterest LinkedIn Tumblr

ನವದೆಹಲಿ: ದಾಂಪತ್ಯ ಜೀವನಕ್ಕೆ ಕಾಲಿಡುವ ಕೊನೆ ಕ್ಷಣದಲ್ಲಿ ವರನ ವಾಟ್ಸಪ್‍ಗೆ ವಧುವಿನ ನಗ್ನ ಫೋಟೋ ಬಂದು ಮದುವೆ ಮುರಿದುಬಿದ್ದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಲೋನಿ ಕಾಲೋನಿಯಲ್ಲಿ ನಡೆದಿದೆ.

ಫರಿದಾಬಾದ್‍ನಿಂದ ಲೋನಿ ಕಾಲೋನಿಗೆ ವರನ ಮೆರವಣಿಗೆ ಬಂದಿತ್ತು. ಮದುವೆಯಲ್ಲಿ ಅದ್ಧೂರಿಯಾಗಿ ವರಮಾಲಾ ಕಾರ್ಯಕ್ರಮ ಕೂಡ ನಡೆಯಿತು. ಬಳಿಕ ರಾತ್ರಿ 2 ಗಂಟೆಗೆ ಸಪ್ತಪದಿ ತುಳಿಯಲು ವರ- ವಧು ಮದುವೆ ಮಂಟಪಕ್ಕೆ ಬಂದರು. ಈ ವೇಳೆ ವರ ತನ್ನ ಮೊಬೈಲ್‍ನ್ನು ಆನ್ ಮಾಡಿದ್ದಾನೆ.

ವರ ಮೊಬೈಲ್ ಆನ್ ಮಾಡಿದ್ದಾಗ ಯುವಕನೊಬ್ಬ ವಾಟ್ಸಪ್‍ ನಲ್ಲಿ ವಧುವಿನ ನಗ್ನ ಫೋಟೋ ಕಳುಹಿಸಿದ್ದಾನೆ. ಇದನ್ನು ನೋಡಿದ ವರ ಶಾಕ್ ಆಗಿ ಯುವಕನ ಜೊತೆ ಚಾಟ್ ಮಾಡಿ ಜಗಳವಾಡಿದ್ದಾನೆ. ಬಳಿಕ ವರ ಆ ಫೋಟೋಗಳನ್ನು ತನ್ನ ಮನೆಯವರಿಗೆ ತೋರಿಸಿದ್ದಾನೆ.

ವಧುವಿನ ನಗ್ನ ಫೋಟೋ ನೋಡಿದ ವರನ ಕುಟುಂಬದವರು ಶಾಕ್ ಆಗಿ ಈ ಮದುವೆಯನ್ನು ಮುರಿದಿದ್ದಾರೆ. ಬಳಿಕ ವರ ಹಾಗೂ ವಧುವಿನ ಕಡೆಯವರಿಗೆ ಜಗಳವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಘಟನೆಯಲ್ಲಿ ಪೊಲೀಸರು ವರನ ಕೆಲವು ಸಂಬಂಧಿಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Comments are closed.