ಕರಾವಳಿ

ಮಂಗಳೂರು : ಅಪಾರ್ಟ್‌ಮೆಂಟ್‌ನ ಹಳೇ ಲಿಫ್ಟ್​ ನಲ್ಲಿ ಸಿಲುಕಿ ಬಾಲಕ ಮೃತ್ಯು

Pinterest LinkedIn Tumblr

ಮಂಗಳೂರು, ಮಾರ್ಚ್ 27: ಬಹುಮಹಡಿ ವಸತಿ ಸಮುಚ್ಛಯವೊಂದರ ಲಿಫ್ಟ್​ ನಲ್ಲಿ ಸಿಲುಕಿಕೊಂಡ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಬುಧವಾರ ಮಂಗಳೂರಿನ ಲೇಡಿಹಿಲ್ ಸಮೀಪದ ಚಿಲಿಂಬಿಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದದ ಹೂವಿನಹಡಗಲಿಯ ನೀಲಪ್ಪ ಅವರ ಪುತ್ರ ಮೃತ ದುರ್ದೈವಿ. ಮೃತ ಬಾಲಕನನ್ನು ಬಾಗಲಕೋಟೆ ಮೂಲದ ಮಂಜುನಾಥ್ (8) ಎಂದು ಗುರುತಿಸಲಾಗಿದೆ.

ನಗರದ ಲೇಡಿಹಿಲ್ ಹಾಗೂ ಉರ್ವಾಸ್ಟೋರ್ ಮಧ್ಯದ ಚಿಲಿಂಬಿಯ ಭಾರತಿ ಹೈಟ್ಸ್ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದ್ದು, ಲಿಫ್ಟ್​ ಬಾಗಿಲು ಸಮಸೈಯಿಂದ ಈ ಅನಾಹುತ ಸಂಭವಿಸಿದೆ ಎಂದು ಫ್ಲಾಟ್ ನಿವಾಸಿಗಳು ದೂರಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದದ ಹೂವಿನಹಡಗಲಿಯ ನೀಲಪ್ಪ ಎಂಬವರು ಈ ಅಪಾರ್ಟ್​ಮೆಂಟ್ ಕಾವಲಿಗಿದ್ದು, ಇವರ ಪುತ್ರನೇ ಲಿಫ್ಟ್​ಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಈ ಫ್ಲಾಟ್ ನ ಲಿಫ್ಟ್​ ಬಹಳ ಹಳೆಯದಾಗಿದ್ದು, ಲಿಫ್ಟ್​ನೊಳಗೆ ಹೋಗುವಾಗ ಬಾಗಿಲು ಸರಿಯಾಗಿ ಬೀಳದೇ ಲಿಪ್ಟ್ ಚಾಲನೆ ಮಾಡಿದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ನಗರದ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments are closed.