ಕರಾವಳಿ

ನಗರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ಆರಂಭಿಸಿದ ನಳಿನ್ ಕುಮಾರ್ ಕಟೀಲ್

Pinterest LinkedIn Tumblr

ಚುನಾವಣಾ ಪ್ರಚಾರ ಮುನ್ನ ವಿವಿಧ ಕ್ಷೇತ್ರ ದರ್ಶನ ಮಾಡಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್

ಮಂಗಳೂರು, ಮಾರ್ಚ್.27 : ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಮನೆಮನೆಗೆ ತೆರಳಿ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದರು.

ತಮ್ಮ ಚುನಾವಣ ಪ್ರಚಾರ ಆರಂಭಕ್ಕೂ ಮೊದಲು ನಳಿನ್ ಕುಮಾರ್ ಕಟೀಲ್ ಅವರು ನಗರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಬಳಿಕ ವಿಶೇಷ ಪೂಜೆ ಸಲ್ಲಿಸಿ ತಮ್ಮ ಗೆಲುವಿಗಾಗಿ ಪ್ರಾರ್ಥಿಸಿದರು.

ಬುಧವಾರಬೆಳಗ್ಗೆ ನಗರದ ಉರ್ವಾಸ್ಟೋರ್‌ನಲ್ಲಿರುವ ಕೊಟ್ಟಾರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಮೊಕ್ತೇಸರರಾದ ಸುರೇಂದ್ರ ರಾವ್ ಅವರು ನಳಿನ್ ಕುಮಾರ್ ಅವರಿಗೆ ಆಶೀರ್ವಾದ ಮಾಡಿದರು.

ಬಳಿಕ ಉರ್ವ,ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಿಶ್ಚಂದ್ರ ಬೈಕಂಪಾಡಿಯವರು ನಳಿನ್ ಕುಮಾರ್ ಕಟೀಲ್ ಅವರನ್ನು ಆಶೀರ್ವದಿಸಿದರು.

ತದನಂತರ ಮಂಗಳೂರು, ರಥಬೀದಿ ಶ್ರೀ ಕಾಳಿಕಾಂಬಾ ದೇವಸ್ಥಾನ, ರಥಬೀದಿ ಶರವು ಶ್ರೀ ಮಹಾ ಗಣಪತಿ ದೇವಸ್ಥಾನ, ಥಬೀದಿ ವೆಂಕಟ್ರಮಣ ದೇವಸ್ಥಾನಗಳಿಗೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ಈ ಸಂಧರ್ಭದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ‌ ವೇದವ್ಯಾಸ್ ಕಾಮತ್, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್,ರಾಜ್‌ಗೋಪಾಲ್ ರೈ,ಲಕ್ಷಣ್ ಶೇಟ್, ಭಾಸ್ಕರ್ ಚಂದ್ರ ಶೆಟ್ಟಿ, ವಾರ್ಡ್ ಅಧ್ಯಕ್ಷ ಉಮೇಶ್ ಶೆಟ್ಟಿ,ಮಂಡಲ‌ ಪ್ರಧಾನ ಕಾರ್ಯದರ್ಶಿ ರಮೇಶ್ ಕಂಡೆಟ್ಟು, ಶಕ್ತಿ ಕೇಂದ್ರ ಅಧ್ಯಕ್ಷ ಜನಾರ್ದನ್ ಕುಡುವ, ಬಿಜೆಪಿ ಚುನಾವಣಾ ಸಂಚಾಲಕರಾದ ಪ್ರೇಮಾನಂದ ಶೆಟ್ಟಿ, ಮಾಧ್ಯಮ ಪ್ರಮುಖ್ ಶ್ರೀನಿವಾಸ್ ಶೇಟ್, ಪಕ್ಷದ ಪ್ರಮುಖರಾದ ಸಂಜಯ್ ಪ್ರಭು, ವಸಂತ್ ಜೆ ಪೂಜಾರಿ, ರಾಜೇಂದ್ರ ಕುಮಾರ್, ಕೃಷ್ಣ ಆಶೋಕ್ ನಗರ, ಸಚಿನ್ ರಾಜ್ ರೈ, ಮೋಹನ್ ಶೆಟ್ಟಿ ಉರ್ವಾಸ್ಟೋರ್, ವಸಂತ್ ಅಶೋಕ್ ನಗರ, ಕೊಟ್ಟಾರ ಮಹಾಗಣಪತಿ ದೇವಸ್ಥಾನ ಸಮಿತಿಯ ಪ್ರಮುಖರಾದ ಶಶಿಧರ್.ಕೆ, ಗೋಪಾಲಕೃಷ್ಣ ಕಲ್ಬಾವಿ, ಗುರುಪ್ರಸಾದ್, ಗಿರಿಧರ್ ಶೆಟ್ಟಿ, ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಮುಖರಾದ ದೇವಾನಂದ ಗುಜರನ್ ಬೋಳೂರು, ಯಾದವ ಸಾಲ್ಯಾನ್ ಕುದ್ರೋಳಿ, ಮೂರನೇ ಗ್ರಾಮ,ವಾರ್ಡ್ ಅಧ್ಯಕ್ಷ ಅರುಣ್ ಕುಮಾರ್, ವಿನಯ್ ಎಲ್ ಶೆಟ್ಟಿ ಕಿಶೋರ್ ಕುಮಾರ್, ಅಜಿತ್,ಕೃಷ್ಣ,ನಾಗೇಶ್ ಶೆಟ್ಟಿಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.